ಕಾಗವಾಡ:ಕೃಷ್ಣಾ ಸಕ್ಕರೆ ಕಾರ್ಖಾನೆ ಮತದಾನದ ವೇಳೆ ಯಾವುದೇ ರೀತಿ ಅಕ್ರಮ ನಡೆದಿಲ್ಲ ಮಹೇಶ ಕುಮಟಳ್ಳಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಅವರು ಹತಾಶೆ ಭಾವನೆಯಿಂದ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಸೋಮವಾರ ದಿ.27 ರಂದು ಕಾಗವಾಡ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಮಾತನಾಡುತ್ತಾ, ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಮ್ಮ ಬಣದ 13 ಸದಸ್ಯರು ಆಯ್ಕೆಗೊಂಡಿದ್ದು,ನಮ್ಮ ಮೇಲೆ ವಿಶ್ವಾಸವಿಟ್ಟುಮತ್ತೋಮ್ಮೆ ನಮಗೆ ಅಧಿಕಾರ ನಡಸಲು ಅನುಕೂಲ ಮಾಡಿಕೊಟ್ಟ ಎಲ್ಲ ರೈತ ಮತದಾರರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ ಚೌಗಲಾ ,ಕಾಕಾ ಪಾಟೀಲ್,ಪದ್ಮಾಕರ ಕರವ,ವಿನಾಯಕ ಚೌಗಲಾ,ಜ್ಯೋತಿಕುಮಾರ ಪಾಟೀಲ್,ಶಾಂತಿನಾಥ ಕರವ,ಸೋಮರಾಜ ಪಾಟೀಲ್, ಗುತ್ತಿಗೆದಾರ ಆದಿತ್ಯ ಬಿಂಗೆ,ವೃಷಭ ಪಾಟೀಲ್,ಅವಿನಾಶ ದೇವಣೆ,ಮಹಾಂತೇಶ ಬಡಿಗೇರ,ಸುಧೀರ ಕರವ,ಉದಯ ಖೋಡೆ,ಅಶೋಕ ಪೂಜೇರಿ,ಮಹೇಶ್ ಪೂಜೇರಿ,ಜನಾರ್ಧನ ದೊಂಡಾರೆ ಸೇರಿದಂತೆ ಅನೇಕರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




