Ad imageAd image

ಸಾವಯುವ ಕೃಷಿಗೆ ಸಾವಿಲ್ಲ ಮಹೇಶ್ ಪಾಟೀಲ

Bharath Vaibhav
ಸಾವಯುವ ಕೃಷಿಗೆ ಸಾವಿಲ್ಲ ಮಹೇಶ್ ಪಾಟೀಲ
WhatsApp Group Join Now
Telegram Group Join Now

ಚಿಕ್ಕೋಡಿ:– ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ  ತಂತ್ರಜ್ಞಾನ ಹಾಗೂ ವೈಜ್ಞಾನಿಕ ಯುಗದಲ್ಲಿ ದಾಪುಗಾಲು ಇಡುತ್ತಿರುವ ರೈತರಿಗೆ ಸಾವಯುವ ಕೃಷಿ ಒಂದು ವರದಾನವಾಗಿದೆ.ಸಾವಯುವ ಕೃಷಿಗೆ ಸಾವಿಲ್ಲ ಎಂದು ನ್ಯಾಯವಾದಿ ಹಾಗೂ ಪ್ರಗತಿಪರ ಸಾವಯುವ ಕೃಷಿಕರಾದ ಮಹೇಶ್ ಪಾಟೀಲ್ ಹೇಳಿದರು.

ಅವರು ಕೆ ಎಲ್ ಇ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ಎನ್ ಎಸ್ ಎಸ್ ಘಟಕದ ವತಿಯಿಂದ ಹಮ್ಮಿಕೊಂಡ ದತ್ತು ಗ್ರಾಮ ಇಂಗಳಿಯಲ್ಲಿ 5 ನೇ ದಿನದ ಶಿಬಿರದಲ್ಲಿ ಸಾವಯವ ಕೃಷಿ ಜಾಗೃತಿ ಅಭಿಯಾನ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.ಸಾಯುವ ಕೃಷಿ ಅತ್ಯಂತ ಸರಳ ಹಾಗೂ ಅಗ್ಗವಾಗಿದೆ. ಪರಿಸರ ಸಮತೋಲನವನ್ನ ಸರಿಪಡಿಸುವುದಲ್ಲದೆ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದ್ದು ಅದು ಭೂಮಿಯನ್ನು ದೀರ್ಘಕಾಲಿಕವಾಗಿ ಫಲವತ್ತತೆಯನ್ನು ಕಾಪಾಡುತ್ತದೆ.

ವಿಷ ಮುಕ್ತ ಭಾರತ ನಿರ್ಮಾಣ ಮಾಡುವುದಾದರೆ ಎಲ್ಲರೂ ಸಾವಯುವ ಕೃಷಿಯ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ರೈತ ಬಹುಬೇಗ ಶ್ರೀಮಂತನಾಗಲು ಹಪಹಪಿಸುತ್ತಾನೆ.ಬಹುತೇಕ ಭೂಮಿಯು ಇಂದು ಸವಳು ಜವಳು ಅಧಿಕವಾಗಲು ರೈತರು ಬೇಕಾಬಿಟ್ಟಿಯಾಗಿ ಗದ್ದೆಗಳಲ್ಲಿ  ವಿಪರೀತ ನೀರು ಪೂರೈಸುವುದು ಅಧಿಕ ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶಗೊಂಡು ನೀರಿಕ್ಷೆಗೆ ತಕ್ಕಂತೆ ಕೃಷಿಯಿಂದ  ಲಾಭ ಬಾರದೇ ಇರುವುದು ಒಂದು ಮುಖ್ಯ ಕಾರಣವಾಗಿದೆ.

ಕೃಷಿಯಲ್ಲಿ ಸಮಗ್ರ ಸುಧಾರಣೆ ತರಬೇಕಾದರೆ ಪ್ರಸ್ತುತ ಸಾವಯುವ ಕೃಷಿಯ ಕುರಿತು ನಾವೆಲ್ಲರೂ ವ್ಯಾಪಕವಾಗಿ ಅರಿತುಕೊಂಡು ಪ್ರಾಯೋಗಿಕವಾಗಿ ಅನುಷ್ಠಾನ ತರಬೇಕಾದ ಅಗತ್ಯ ಇದೆ ಎಂದು ವಿಸ್ತೃತವಾಗಿ ವಿಶ್ಲೇಷಣೆ ಮಾಡಿದರು.ರಾಯಬಾಗದ ಪತಂಜಲಿ ಕರ್ನಾಟಕ ಸ್ಟೇಟ್ ಹೆಡ್ ಕಿಸಾನ್ ಸೇವಾ ಸಮಿತಿಯ ರಾಯಬಾಗದ ಸಂಜಯ್ ಎಸ್ ಕುಷ್ಟಗಿಗಾರ ಅವರು ಪೀಠಿಕಾ ನುಡಿಯಾಡಿದರು.ಘನ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ ಬಿ ಆರ್ ನರವಾಡೆ ಮಾತನಾಡಿ  ಸಾವಯುವ ಕೃಷಿಕ ಮನಸ್ಸು ಮಾಡಿದರೆ ಜೀರೋದಿಂದ ಹೀರೊ ಆಗಬಹುದು.

ಇದರಲ್ಲಿ ವಿಪರೀತ ಬಂಡವಾಳ ಹಾಕದೆ ಯಥೇಚ್ಛವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುವ ಕಲೆ  ಒಂದಿದ್ದರೆ ಸಾವಯುವ ಕೃಷಿಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಲು ಸಾಧ್ಯ. ಸಾವಯುವ ಕೃಷಿಯನ್ನು ಎಲ್ಲಿಯವರೆಗೆ  ನಾವು ಚೆನ್ನಾಗಿ ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ  ಕೃಷಿಯಲ್ಲಿ ವಿಪರೀತ ಬದಲಾವಣೆ ಮಾಡಲು ಸಾಧ್ಯವಿಲ್ಲ.

ಸಾವಯುವ ಕೃಷಿಯನ್ನು ಚೆನ್ನಾಗಿ ಅಳವಡಿಸಿಕೊಂಡು ಇದರ ಲಾಭವನ್ನು ಪಡೆದಿದ್ದೇನೆ ಎಂದು ತಮ್ಮ ಸ್ವಾನುಭವಗಳನ್ನು ಸೊಗಸಾಗಿ ಅಭಿಮಾನದಿಂದ ಹಂಚಿಕೊಂಡರು.ಮಹಾವಿದ್ಯಾಲಯದ ಪ್ರಾಚಾರ್ಯರಾದ  ಪ್ರೊ. ಎಸ್ ಬಿ ಪಾಟೀಲ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಎಂ ಎಸ್ ಕೌಲಗುಡ್ದ್ ವಾಣಿಜ್ಯ ವಿಭಾಗದ ಸಂಯೋಜಕರು ಹಾಗೂ ಚುಟುಕು ಕವಿ ಪ್ರೊ ಎಲ್ ಎಸ್ ವಂಟಮೂರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕು. ಸೌಜನ್ಯ ಮಗದುಮ್ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು.ಕು.  ಸ್ವಾತಿ ಚರಾಟೆ ಹಾಗೂ ಸಂಗಡಿಗರು ಭಾವೈಕ್ಯತಾ ಗೀತೆ ಹಾಡಿದರು. ಕು ಸಮೀಕ್ಷಾ ಶಿರಗುಪ್ಪೆ ಸ್ವಾಗತಿಸಿದರು.ಕು ಸಂಧ್ಯಾ ಚೌಗಲೆ ನಿರೂಪಿಸಿದರು. ಕು. ಆಕಾಶ್ ಹವಾಲ್ದಾರ ಇವರು ವಂದಿಸಿದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!