ಬಾದಾಮಿ:ಇತಿಹಾಸ ಪ್ರಸಿದ್ಧ ಉತ್ತರ ಕರ್ನಾಟಕದಲ್ಲೇ ಅತೀ ದೊಡ್ಡ ಜಾತ್ರೆ ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಶಕ್ತಿ ಪೀಠ ಬಾದಾಮಿ ಬನಶಂಕರಿ ದೇವಿಯ ಮಹಾರತೋತ್ಸವ ಇಂದು ಜರುಗುವುದು. ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ. ಅದರಲ್ಲೂ ಕಾಲ್ನಡಿಯಲ್ಲಿ ಪಾದಯಾತ್ರಿಗಳು ಹಗಲು ರಾತ್ರಿಎನ್ನದೇ ನಡೆದುಕೊಂಡು ಬನಶಂಕರಿ ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಬಾದಾಮಿಯ ಯುವ ಮುಖಂಡ ಕೆ. ಪಿ. ಸಿ. ಸಿ. ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡ್ರ ನೇತೃತ್ವದಲ್ಲಿ ಅವರ ಅಭಿಮಾನಿ ಬಳಗದಿಂದ ಪ್ರತಿ ವರ್ಷದಂತೆ ಈ ಸಲವೂ ಬನಶಂಕರಿ ದೇವಿ ಜಾತ್ರೆಗೆ ಬರುವ ಪಾದಯಾತ್ರಿಗಳಿಗೆ ಪ್ರಸಾದ ಸೇವೆಯನ್ನು ಏರ್ಪಡಿಸಿ ಭಕ್ತರಿಗೆ ಪ್ರಸಾದ ಉಣಬಡಿಸಿ ಮಹೇಶ್. ಎಸ್. ಹೊಸಗೌಡ್ರ ಅಭಿಮಾನಿ ಬಳಗದವರು ಶಾಖoಭರಿ ಜಗನ್ಮಾತೆ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾಗಿ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ.
ವರದಿ:ರಾಜೇಶ್. ಎಸ್. ದೇಸಾಯಿ