ಸೇಡಂ:– ತಾಲೂಕಿನ ಯಾನಗುಂದಿ ಗ್ರಾಮದಲ್ಲಿ ಜಾತಿನಿಂದನೆ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ದಿನಾಂಕ ೪/೦೧/೨೦೨೬ರಂದು ಪ್ರಕರಣ ದಾಖಲಾಗಿದ್ದು ಇದುವರೆಗೂ ಆ ವ್ಯಕ್ತಿಯನ್ನು ಬಂಧಿಸದೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ತುಂಬಾ ವಿಷಾದನೀಯ ಘಟನೆ.
ಪ್ರಕಟಣೆ ಹಿನ್ನಲ್ಲೇ ದಿನಾಂಕ ೩೧/೧೨/೨೦೨೫ ರಂದು ಯಾನಗುಂದಿ ಗ್ರಾಮದ ರೆಡ್ಡಿ ಸಮಾಜದ ವ್ಯಕ್ತಿಯಾದ ಮಾಣಿಕ್ ರೆಡ್ಡಿ ತಂದೆ ಜಗನ್ನಾಥ ರೆಡ್ಡಿ ಅವರು ತಮ್ಮ ವೈಯಕ್ತಿಕ ಜಗಳದಲ್ಲಿ ಮಾದಿಗ ಸಮಾಜದ ವ್ಯಕ್ತಿಯಾದ ಮಹಿಪಾಲ್ ತಂದೆ ಬಾಲಪ್ಪ ದೊಡ್ಮನೆ ಇವರ ಹೆಸರು ಪ್ರಸ್ತಾಪ ಮಾಡಿದ್ದಲ್ಲದೆ ಮಾದಿಗ ಜಾತಿಯ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಿಸಿ ಬೈಯ್ದು ಜಾತಿ ನಿಂದನೆ ಮಾಡಿದ್ದು ಸದರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ.
ವಿಡಿಯೋ ನೋಡಿದ ಸೇಡಂ ಮಾದಿಗ ಸಮಾಜ ಮುಖಂಡರಾದ ಮಾರುತಿ ಮುಗುಟಿ ಅವರು ಆಕ್ರೋಶಗೊಂಡು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್, ಐ ಆರ್ ಮಾಡಿರುತ್ತಾರೆ.
ಆದರೆ ಇದುವರೆಗೂ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಇದರಿಂದ ಊರಿನ ಜನರು ಹಣ ಪಡೆದು ವಾಪಸ್ ಆಗಿರಬೇಕು ಎಂಬ ಆರೋಪಗಳು ಮಾಡುತ್ತಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡ ಮಹಿಪಾಲ್ ದೊಡ್ಮನೆ ಅವರು ಆರೋಪಿಸಿದ್ದಾರೆ.
ಸದರಿ ವ್ಯಕ್ತಿಯನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು ಒಂದುವೇಳೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಕಲಬುರಗಿ ಎಸ್ಪಿ ಆಫೀಸಿಗೆ ದೂರು ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




