ಸೇಡಂ: ತಾಲೂಕಿನ ಯಾನಗುಂದಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ೨ ಸಂಪೂರ್ಣ ಹದೆಗೆಟ್ಟಿದೆ.
ಸ್ವಲ್ಪ ಮಳೆಬಂದರೆ ಸಾಕು ಇಡಿ ಕೋಣೆ ಸೋರುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಬಂದಿರುವ ಸಾಮಗ್ರಿಗಳು ಆ ನೀರಿನಲ್ಲಿ ಮುಳುಗುತ್ತಿವೆ.
ಸಹಕಿಯಾರು ಅನೇಕ ಅವುಗಳನ್ನ ಭದ್ರತೆ ಸ್ಥಳದಲ್ಲಿ ಇಟ್ಟಿರುತ್ತಾರೆ ಆದರೂ ಕೆಲವೊಂದು ಸಮಯದಲ್ಲಿ ಅತಿಯಾದ ಮಳೆಯಾಗಿ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ.
ಅಷ್ಟೇ ಅಲ್ಲದೆ ಈ ಅಂಗನವಾಡಿ ಕೇಂದ್ರವು ಮೊದಲು ಸಮುದಾಯ ಭವನ ಆಗಿತ್ತು. ಸದ್ಯಕ್ಕೆ ಅದನ್ನು ಉಪಯೋಗಿಸಿಕೊಳ್ಳಲು ಆದೇಶ ನೀಡಿದ್ದರು ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುತ್ತವೆ ಎಂದು ಭರವಸೆ ನೀಡಿದರು ಆದರೆ ಇಲ್ಲಿಯವರೆಗೂ ಯಾವುದೇ ಕಾಮಗಾರಿ ಶಂಕುಸ್ಥಾಪನೆ ಕೂಡ ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ನಿವಾಸಿ ಮಹಿಪಾಲ್ ದೊಡ್ಮನಿ ಅಗ್ರಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್