ಸೇಡಂ:- ತಾಲೂಕಿನ ಮಳಖೇಡ ಗ್ರಾಮದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ರೋಗಿಗಳು ಬಂದರೆ ಇನ್ನಷ್ಟು ರೋಗ ಹೆಚ್ಚಿಸಿಕೊಂಡು ಹೋಗಬೇಕು ಎಂಬ ಪರಿಸ್ಥಿತಿಯಲ್ಲಿದೆ.
ರೋಗಿಗಳು ತಮ್ಮ ತೊಂದರೆಗಳಿಂದ ಆಸ್ಪತ್ರೆಗೆ ಬಂದಾಗ ಡಾಕ್ಟರ್ ಚೆಕ್ ಅಪ್ ಮಾಡಿ ಹೆಚ್ಚಿನ ಚಿಕಿತ್ಸೆ ಮಾಡಬೇಕಾದರೆ ಬೆಡ್ ಗಳು ಇವೆ ಆದರೆ ಹಾಸಿಗೆಗಳು ಇಲ್ಲ.
ಈ ರೀತಿ ಇದ್ದರೆ ಜ್ವರ ಮತ್ತು ಚಳಿ ಇರುವ ರೋಗಿಯ ಪರಿಸ್ಥಿತಿ ಏನಾಗಬೇಕು.
ಮುಖ್ಯ ವೈದ್ಯಾಧಿಕಾರಿಗಳಿಗೆ ಕೇಳಿದಾಗ.
ನಾನು ಇಲ್ಲಿಗೆ ಬಂದು ಕೆಲವೇ ದಿನಗಳು ಆಯಿತು ಇನ್ನು ಸಂಪೂರ್ಣ ಸಾಮಗ್ರಿ ಯಾವುದೇ ಸಿಕ್ಕಿಲ್ಲ.
ಅಷ್ಟೇ ಅಲ್ಲದೆ ಇಂದು ಕಲ್ಯಾಣ ಕರ್ನಾಟಕ ಉತ್ಸವ ಸಮಯದಲ್ಲಿ ಹಾಸಿಗಳನ್ನು ಮಹಾನ್ ನಾಯಕರ ಫೋಟೋಗಳ ಕೆಳಗೆ ಹಾಕಿರುತ್ತಾರೆ.
ಅಷ್ಟೇ ಅಲ್ಲದೆ ಧ್ವಜಾರೋಹಣ ಸಂದರ್ಭದಲ್ಲಿ ಇವರು ಮಹಾತ್ಮ ಗಾಂಧಿ ಭಾವಚಿತ್ರ ಕೂಡ ಇಲ್ಲ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸರದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಗಳಿಗೆ ಮಾತ್ರ ಮಾಲಾರ್ಪಣೆ ಮಾಡಿದ್ದಾರೆ.
ವಿಶೇಷವಾಗಿ ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದೆ.
ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮಳಖೇಡ ದಲಿತ ಸೇನೆ ವಲಯ ಅಧ್ಯಕ್ಷರಾದ ಭಗವಾನ್ ಭೋಚಿನ್ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.