ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾಂವ್ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ ಬುಡರಕಟ್ಟಿ ವಲಯದ ತುರುಕರ ಸೀಗೆಹಳ್ಳಿ ಕಾರ್ಯಕ್ಷೇತ್ರದಲ್ಲಿ ಕನ್ನಡಾಂಬೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚೆನ್ನವ್ವ ಎಕೋನಿ,ಗಿರಿ ಮಲ್ಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀಯುತ ಮಲ್ಲೇಶಪ್ಪಾ ಕಂಬಳಿ,ಊರಿನ ಹಿರಿಯರಾದ ಕಲ್ಲೇಶಪ್ಪ ಹೊಸಟ್ಟಿ, ಕೇಂದ್ರದ ಅಧ್ಯಕ್ಷರಾದ ಮಾದೇವಿ ನರಗಟಿ, ಬೀದಿ ನಾಟಕ ಕಲಾ ತಂಡದ ಮುಖ್ಯಸ್ಥರಾದ ಶರೀಫ್ ದೊಡ್ಡಮನಿ,ಸರ್ವ ಸದಸ್ಯರು ಸಮ್ಮುಖದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಚಾಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ದೇಶಿಸಿ ವಲಯದ ಮೇಲ್ವಿಚಾರಕರಾದ ಪರಶುರಾಮ್ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.ಬೀದಿನಾಟಕದ ಮೂಲಕ ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ, ಶಿಕ್ಷಣದ ಮಹತ್ವ ಬಗ್ಗೆ, ಶೌಚಾಲಯ ಬಳಕೆ ಬಗ್ಗೆ ಭಾರತೀಯ ಸಂಸ್ಕೃತಿ ಬಗ್ಗೆ ಕುಟುಂಬ ಮಹತ್ವ ಬಗ್ಗೆ ಜಾಗೃತೆ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ನಿರೂಪಣೆ ಮಾಡಿದರು,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೈಲಾ ಕಾರ್ಯಕ್ರಮದ ಸ್ವಾಗತ ಮಾಡಿದರು.ಸೇವಾ ಪ್ರತಿನಿಧಿಗಳಾದ ಸವಿತಾ,ಲಕ್ಷ್ಮಿ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ




