ಬೆಂಗಳೂರು : ಸಂವಿಧಾನದ ಆಶಯಗಳನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಮಾತನಾಡಿದ ಅವರು, 76ನೇ ಗಣರಾಜ್ಯೋತ್ಸವ ಆಚರಿಸ್ತಿದ್ದೇವೆ,.ಸಂವಿಧಾನ ರಕ್ಷಣೆ, ಸಂವಿಧಾನದ ಪ್ರಕಾರ ನಡೆದುಕೊಳ್ಳುವುದು ಮುಖ್ಯ ಎಂದರು.
ಇತ್ತೀಚೆಗೆ ಸಂವಿಧಾನದ ಎಲ್ಲಾ ಆಶಯಗಳನ್ನ ಕೇಂದ್ರ ಸರ್ಕಾರದ ಮೂಲೆ ಗುಂಪು ಮಾಡಿದೆ. ಹೆಣ್ಣು ಮಕ್ಕಳ ಸ್ವಾತಂತ್ರ್ಯ ಮೊಟಕುಗೊಳ್ಳುತ್ತಿದೆ.
ಸಂವಿಧಾನ ಆಚರಣೆಗೆ ಬಂದಮೇಲೆ ನಮಗೆಲ್ಲಾ ಸ್ಥಾನ ಮಾನ ಸಿಗ್ತಿದೆ. ಜನ ಮನೆಬಾಗಿಲಿಗೆ ಬಂದು ಮತ ಕೇಳುತ್ತಾರೆ. ಇದು ಕಾಂಗ್ರೆಸ್ ಪಕ್ಷದ, ಅಂಬೇಡ್ಕರ್, ನೆಹರು ಅವರ ಕೊಡುಗೆ ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.
ಈ ಕೊಡುಗೆಯಿಂದಲೇ ದೇಶವನ್ನ ಸ್ವತಂತ್ರವಾಗಿ ಉಳಿಸಿದ್ದೇವೆ. ನಮ್ಮ ದೇಶದ ಪ್ರಮುಖ ನಾಯಕರು ಅಮಿತ್ ಶಾ ಸಂವಿಧಾನಕ್ಕೆ ಅಪಮಾನ ಮಾಡ್ತಾರೆ. ಸಂವಿಧಾನ ತಂದವರನ್ನು ಅಪಮಾನ ಮಾಡ್ತಿದ್ದಾರೆ.
ನಾನು ರಾಜ್ಯಸಭೆಯಲ್ಲಿ ಇದ್ದೆ. ಅಂಬೇಡ್ಕರ್ ಅಂಬೇಡ್ಕರ್ ಅನ್ನುವ ಬದಲು ಇಷ್ಟು ದೇವರ ಹೆಸರು ಹೇಳಿದ್ದರೆ ಸ್ವರ್ಗ ಸಿಕ್ತಿತ್ತು ಎಂದು ಹೇಳಿದ ಅಮಿತ್ ಶಾ ದೇಶಕ್ಕಾಗಿ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದು ಹರಿಹಾಯ್ದರು.