ಬೆಳಗಾವಿ : ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಸಂಸತ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ‘ಅಂಬೇಡ್ಕರ್ ಜಪ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಕುರಿತಾಗಿ ಇಂದಿನ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ನಿಮಿತ್ತ ವೀರಸೌಧ ಬಳಿಯ ಗಾಂಧಿ ಬಾವಿ (ಪಂಪ ಸರೋವರ) ಬಳಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತಾಪಿಸಿದರು.
ಅಮಿತ್ ಶಾ ಹೇಳಿಕೆ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. ದೇಶಾದ್ಯಂತ ಜನಾಂದೋಲನದ ಅಗತ್ಯವಿದ್ದು, ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡೀ ಕೇಂದ್ರ ಸರ್ಕಾರ ತನ್ನ ತಪ್ಪು ಒಪ್ಪಲು ಸಿದ್ಧರಿಲ್ಲ ಎಂದು ಕುಟುಕಿದರು.
ಶಾ ಹೇಳಿಕೆಯು ಸಂವಿಧಾನದ ನಿರ್ಮಾತರಿಗೆ ಅವಮಾನ ಮಾಡಿದೆ. ಈ ಕುರಿತಾಗಿ ದೇಶಾದ್ಯಂತ ಹೋರಾಟದ ರೂಪುರೇಷೆ ಅಗತ್ಯವಾಗಿದೆ ಎಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖರ್ಗೆ ಅವರು ಅಭಿಪ್ರಾಯಪಟ್ಟರು. ಶಾ ಹೇಳಿಕೆ ವಿರುದ್ಧ ಸಂಸತ್ ಭವನದ ಎದುರು ವಿಪಕ್ಷ ನಾಯಕರು ಬೃಹತ್ ಹೋರಾಟ ಮಾಡಿದ್ದು ಗೊತ್ತೇ ಇದೆ.