ಚಿಟಗುಪ್ಪ: ರಾಜ್ಯ ಸರ್ಕಾರ ಘೋಷಿಸಿದ ಕಬ್ಬಿನ ಬೆಲೆ ಜಾರಿ ಮಾಡುವಂತೆ ಹುಮನಾಬಾದ ಪಟ್ಟಣದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ರೈತರಿಂದ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ ಎಂದು ಮಲ್ಲಿಕಾರ್ಜುನ ಪಾಟೀಲ್ ಬೆಳಕೇರಾ ರೈತ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಟಗುಪ್ಪ ಪಟ್ಟಣದಲ್ಲಿ ಗುರುವಾರ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿ ಪಾಟೀಲ್,ರೈತರು ಪ್ರತಿಭಟನೆಯಿಂದ ದೂರ ಉಳಿದ್ದಾರೆ.ಜಿಲ್ಲಾ ಅಧಿಕಾರಿಗಳು ಪ್ರತಿಭಟನೆಯಲ್ಲಿ ಬಂದಾಗಲು ಕೂಡ ರೈತರು ಇರಲಿಲ್ಲ ಎಂದು ಆರೋಪ ಮಾಡುದರು.
ಬೇರೆ ಜಿಲ್ಲೆಯಲ್ಲಿ ಕಬ್ಬಿನ ಬೆಳೆಗೆ ನೀಡುವ ಬೆಲೆ ನಮ್ಮ ಜಿಲ್ಲೆಯಲ್ಲಿ ಯಾಕೆ ನೀಡುತ್ತಿಲ್ಲ.ರಿಕವರಿ ಬರೋದಿಲ್ಲ ಎಂದು ಹೇಳುವ ಮಾಲೀಕರು ರೈತರ ಹೊಲದಲ್ಲಿ ಚೆಕ್ ಮಾಡಿ ಕಬ್ಬು ತೆಗೆದುಕೊಳ್ಳಬೇಕು.ಏನೇ ಇರಲಿ ರೈತರು ದೇಶದ ಬೆನ್ನೆಲುಬು,ಅವರಿಗೆ ಪ್ರತಿಯೊಂದು ಸಂಘಟನೆಯವರು ಬೆಂಬಲ ಬೆಂಬಲ ನೀಡಬೇಕು ಎಂದು ಹೇಳಿದರು.
ವರದಿ: ಸಜೀಶ ಲಂಬುನೋರ್




