ಚಿಟಗುಪ್ಪ :ಮಾರ್ಚ್ 28ರಂದು ಹಿಪ್ಪರಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಳಸರೋಹಣ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ ಎಂದು ಪೂಜ್ಯ ಪ್ರದೀಪ ಅಪ್ಪಾಜಿ ತಿಳಿಸಿದರು.
ಚಿಟಗುಪ್ಪ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ಕರೆದ ಪತ್ರಿಕಾಘೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮಾರ್ಚ್ 28 ಶುಕ್ರವಾರದಂದು ಬೆಳಗ್ಗೆ ಗ್ರಾಮದ ಲಕ್ಷ್ಮೀ ಮಂದಿರದಿಂದ ಮಲ್ಲಿಕಾರ್ಜುನ ದೇವಸ್ಥಾನದ
ವರೆಗೆ ಪಲ್ಲಕಿ ಮತ್ತು ಕಳಸದ ಭವ್ಯ ಮೆರವಣಿಗೆ ನಡೆಯಲಿದೆ.ಮಧ್ಯಾಹ್ನ ವೇದಿಕೆ ಸಮಾರಂಭ ಜರುಗಲಿದ್ದು ಅದರಲ್ಲಿ ಪೂಜ್ಯರು,ಗಣ್ಯರು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಮಂತ ಪಾಟೀಲ,ವಕೀಲರಾದ ಸತೀಶ ರಾಂಪುರೆ,ಮಲ್ಲಿಕಾರ್ಜುನ ಮಹೇಂದ್ರಕರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗಪ್ಪ ವಡ್ಡನಕೆರಾ,ಪ್ರಕಾಶ ಉಡಬಾಳಕರ್,ವಿಠ್ಠಲರಾವ ಬೆನಚುಂಚೋಳಿ, ತಾನಾಜಿ ಪಾಟೀಲ ಉಪಸ್ಥಿತರಿದ್ದರು.
ವರದಿ:ಸಜೀಶ ಲಂಬುನೋರ