ಹುಮನಾಬಾದ: ತಾಲ್ಲೂಕಿನ ಮಾದರಗಾಂವ ಗ್ರಾಮದ ಐತಿಹಾಸಿಕ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತ್ತು.
ಪ್ರತಿ ವರ್ಷ 3 ದಿವಸಗಳ ವರೆಗೆ ಜರುಗುವ ಜಾತ್ರೆಯಲ್ಲಿ ಸಹಸ್ರರಾರು ಭಕ್ತರು ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ.ಜಂಗಿ ಕುಸ್ತಿ,ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ, ಹಾಸ್ಯ ಕಲಾವಿದರಿಂದ ಮನೋರಂಜನೆ ಸೇರಿ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ವಿಶೇಷವಾಗಿ ಶ್ರೀ ಮಲ್ಲಿಕಾರ್ಜುನ ಜಾತ್ರೆಯ ನಿಮಿತ್ತ ರಕ್ತದಾನ ಶಿಬರವನ್ನು ಏರ್ಪಡಿಸಿ ಯುವಕರಿಂದ ರಕ್ತದಾನ ಮಾಡಿಸಲಾಯಿತು. ಸಕಲ ಭಕ್ತಾದಿಗಳ ದೇಣಿಗೆಯಿಂದ ಜಾತ್ರಾ ಮಹೋತ್ಸವ ಪ್ರತಿವರ್ಷ ಜರುಗುತ್ತಿದೆ.ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಸರ್ಕಾರದ ಅನುದಾನ ಸಿಕ್ಕಿಲ್ಲ.ಇಂತಹ ಬ್ರಹತ್ ದೇವಸ್ಥಾನಕ್ಕೆ ಸರ್ಕಾರ ನಿರ್ಲಕ್ಷ ಮಾಡದೆ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಸ ನೀಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ರಾಜಶೇಖರ್ ಪಾಟೀಲ ಮಾದರಗಾಂವ ಒತಾಯಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷ ಶಿವಕುಮಾರ ಹುಣಸಗೇರಾ,ರಘುನಾಥ ಮಲಗೊಂಡ,ಮಲ್ಲಿಕಾರ್ಜುನ ಮಹೇಂದ್ರಕರ, ಜೈಕುಮಾರ ಸಾಗರ,ಬಸವ ಪಾಟೀಲ,ಕೇಧರ ಉಡಬಾಳ,ವಿಶಾಲ ನೀಲಶೇಟ್ಟಿ ಸೇರಿ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.




