ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಿಂದ ಈ ಬಾರಿ ಡಬಲ್ ಸೂರಜ್, ಮಾಳು ನಿಪನಾಳ ಮನೆಯಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡದ ವಿರುದ್ಧ ಮಾಳು ಪತ್ನಿ ಮೇಘಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಮಾಳು ನನಗೆ ಉತ್ತರ ಕರ್ನಾಟಕ ಜನತೆಯ ಬೆಂಬಲವಿತ್ತು. ಹೀಗಾಗಿ ನಾನೇ ಗೆಲ್ಲಬೇಕಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದರು. ಇದೀಗ ಮಾಳು ಪತ್ನಿ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪಂದನಾ ಹಾಗೂ ಕಾವ್ಯಾಗಿಂತ ಸೂರಜ್, ಮಾಳು, ಸುಧಿ, ಜಾಹ್ನವಿ ಡಮ್ಮಿ ಆಗಿರೋದಕ್ಕೆ ಸಾಧ್ಯವಿಲ್ಲ. ಈ ವೀಕೆಂಡ್ ಇಡೀ ಕರ್ನಾಟಕ ಜನತೆಗೆ ಬಿಗ್‌ಬಾಸ್-12 ಅತಿಹೆಚ್ಚು ಪಕ್ಷಪಾತ ಮಾಡಿರುವ ಸೀಸನ್ ಅನ್ನೋದು ಕನ್ನರ್ಮ್ ಆಯ್ತು. ಸ್ಪಂದನಾ ಕಲರ್ಸ್ ಕನ್ನಡದ ದತ್ತು ಪುತ್ರಿ ಎನ್ನುವಂತೆ ವ್ಯಂಗ್ಯ ಮಾಡಿ ಮೀಮ್ಸ್‌ಗಳು ಹಾಗೂ ಟ್ರೋಲ್ ಆಗುತ್ತಿದೆ.
ಇದೇ ಮೀಮ್‌ನ್ನು ಮಾಳು ಪತ್ನಿ ಮೇಘಾ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮದು ಕೂಡ ಅದೇ ಅಭಿಪ್ರಾಯವೆಂದು ಪರೋಕ್ಷವಾಗಿ ಹೇಳಿದ್ದಾರೆ.
ಇನ್ನಾ ಗ್ರಾಮ್ ಸ್ಟೋರಿಯಲ್ಲಿ ಮೀಮ್ ಹಂಚಿಕೊಂಡು ಎಲ್ಲಿದೆಯೋ ನ್ಯಾಯ ಅಣ್ಣಾ?” ಎನ್ನುವ ಹಾಡನ್ನು ಹಾಕಲಾಗಿದೆ. ಆದರೆ ಕೆಲವರು ಈ ವಿಚಾರದಲ್ಲಿ ಮಾಳು, ಮೇಘಾ ಅವರಿಗೆಯೇ ತಿರುಗೇಟು ನೀಡಿದ್ದಾರೆ.
ಮಾಳು ಸರಿಯಾಗಿ ಆಟ ಆಡಲಿಲ್ಲ. ಇಷ್ಟು ದಿನ ಅವರು ಮನೆಯಲ್ಲೇ ಇದ್ದಿದ್ದೇ ಹೆಚ್ಚು. ಮನೆಯಿಂದ ಹೊರಬಂದು ಹೀಗೆ ಹೇಳೋದು ಸರಿಯಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮದಲ್ಲಿ ಮಾಳು ವಿಚಾರದಲ್ಲಿಯೇ ರಕ್ಷಿತಾ ತಮ್ಮ ಅಭಿಪ್ರಾಯವನ್ನ ಖಡಕ್ ಆಗಿಯೇ ಹೇಳಿದ್ದಾರೆ. ಇದನ್ನ ಸುಮ್ನೆ ಕುಳಿತು ಕೇಳಿದ್ದ ಸ್ಪಂದನಾ, ಆ ಮೇಲೆ ರೊಚ್ಚಿಗೆದಿದ್ದಾರೆ.
ಮಾಳು ದೊಡ್ಮನೆಯಿಂದ ಹೊರ ಹೋಗಲು ರಕ್ಷಿತಾ ಕಾರಣ ಎಂದು ಸ್ಪಂದನಾ ಆರೋಪಿಸಿದ್ದಾರೆ. ಸ್ಪಂದನಾ ಅವರಿಂಗಿಂತ ಮಾಳು ಉತ್ತಮವಾಗಿದ್ದರು ಎಂದು ರಕ್ಷಿತಾ ಹೇಳಿದರು. ಇದಕ್ಕೆ ಕೌಂಟರ್ ಕೊಡುವಾಗ ಸ್ಪಂದನಾ ಈ ಆರೋಪ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೇಂಟ್ ಹಾಕುತ್ತಿದ್ದಾರೆ.




