ಮ್ಯಾಂಚೆಸ್ಟರ್ (ಇಂಗ್ಲೆಂಡ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ನಾಲ್ಕನೇ ಟೆಸ್ಟ್ ಪಂದ್ಯದ 2 ನೇ ದಿನದ ಮುಕ್ತಾಯಕ್ಕೆ ಇಂಗ್ಲೆಂಡ್ ತನ್ನ ಮೊದಲ ಸರದಿಯಲ್ಲಿ 2 ವಿಕೆಟ್ ಗೆ 225 ರನ್ ಗಳಿಸಿದ್ದು, ಭಾರತದ ಮೊದಲ ಇನ್ನಿಂಗ್ಸ್ ಮೊತ್ತವನ್ನು ಹಿಂದೆ ಹಾಕಲು 133 ರನ್ ಗಳನ್ನು ಗಳಿಸಬೇಕಿದೆ.
ದಿನದಾಟ ಮುಗಿದಾಗ ಜೂ ರೂಟ್ 11 ಹಾಗೂ ಓಲ್ಲಿ ಪೊಪ್ 20 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಭಾರತ ತನ್ನ ಮೊದಲ ಸರದಿಯಲ್ಲಿ 358 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು.
ಸ್ಕೋರ್ ವಿವರ:
ಭಾರತ ಮೊದಲ ಇನ್ನಿಂಗ್ಸ್ 358
ಪಂತ್ 54 (75 ಎಸೆತ, 3 ಬೌಂಡರಿ, 2 ಸಿಕ್ಸರ್), ಶಾರ್ದೂಲ್ ಥಾಕೂರ್ 41 ( 88 ಎಸೆತ, 5 ಬೌಂಡರಿ)
ಸ್ಟೋಕ್ಸ್ 72 ಕ್ಕೆ 5), ಜೋಪ್ರಾ ಆರ್ಚರ 73 ಕ್ಕೆ 3)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 2 ವಿಕೆಟ್ ಗೆ 225
ಜಾಕ್ ಕ್ರಾವಲಿ 84 ( 113 ಎಸೆತ, 13 ಬೌಂಡರಿ, 1 ಸಿಕ್ಸರ್), ಬೆನ್ ಡಕೆಟ್ 94 ( 100 ಎಸೆತ, 13 ಬೌಂಡರಿ)
ಅನ್ಸುಲ್ ಕಾಂಬೋಜ 48 ಕ್ಕೆ 1, ರವೀಂದ್ರ ಜಡೆಜಾ 37 ಕ್ಕೆ 1)




