ಮ್ಯಾಂಚೆಸ್ಟರ್ ( ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ 7 ವಿಕೆಟ್ ಗೆ 544 ರನ್ ಗಳಿಸಿದ್ದು, 186 ರನ್ ಗಳ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ.
ತೃತೀಯ ದಿನದಾಟ ಮುಗಿದಾಗ ಬೆನ್ ಸ್ಟೋಕ್ಸ್ 77 ಹಾಗೂ ಲಿಯಾಮ್ ಡಾವ್ಸನ್ 21 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಇದಕ್ಕೆ ಮುನ್ನ ಜೂ ರೂಟ್ 150 ರನ್ ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಅವರು 14 ಬೌಂಡರಿಗಳನ್ನು ಬಾರಿಸಿದರು.




