ಮ್ಯಾಂಚೆಸ್ಟರ್ ( ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡವು ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಎರಡನೇ ಅವಧಿಯ ಆಟದ ವೇಳೆಗೆ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಎಮಿರೆಟ್ಸ್ ಓಲಟ್ರೆಪೆಡ್ ಮೈದಾನದಲ್ಲಿ ನಡೆದ ಪಂದ್ಯದ ಮೂರನೇ ದಿನ ಭೋಜನ ವಿರಾಮದ ನಂತರದ ಆಟದಲ್ಲಿ ಇಂಗ್ಲೆಂಡ್ ತಂಡವು ಭಾರತದ ಮೊದಲ ಇನ್ನಿಂಗ್ಸ್ ಮೊತ್ತವಾದ 358 ರನ್ ಗಳಿಗೆ ಉತ್ತರವಾಗಿ 4 ವಿಕೆಟ್ ಗೆ 378 ರನ್ ಗಳಿಸಿದ್ದು, 20 ರನ್ ಗಳ ಇನ್ನಿಂಗ್ಸ್ ಮುನ್ನಡೆಯನ್ನು ಪಡೆದಿತ್ತು. ಆ ತಂಡದ ಬಳಿ ಇನ್ನು 6 ವಿಕೆಟ್ ಗಳು ಬಾಕಿ ಇದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ದಾಪುಗಾಲು ಇಟ್ಟಿದೆ.
ಇಂಗ್ಲೆಂಡ್ ಪರವಾಗಿ ಜೂ ರೂಟ್ 93 ರನ್ ಗಳಿಸಿ ಆಟವಾಡುತ್ತಿದ್ದು, ಶತಕದ ಅಂಚಿನಲ್ಲಿ ಇದ್ದಾರೆ. ಬೆನ್ ಸ್ಟೋಕ್ಸ್ 11 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ 30 ಕ್ಕೆ 2 ವಿಕೆಟ್ ಪಡೆದರು.




