ಬೆಂಗಳೂರು : ಮನುಷ್ಯನ ಸುಖೀ ಜೀವನಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಅಡಿಪಾಯ. “ಆರೋಗ್ಯವೇ ಭಾಗ್ಯ” ಎಂಬಂತೆ, ಉತ್ತಮ ಆರೋಗ್ಯವು ರೋಗ ಮುಕ್ತ ಜೀವನದಿಂದ ದೇಶ ಬಲಿಷ್ಠವಾಗುತ್ತದೆ ಎಂದು ಬಡವರ ಬಂಧು ಕೊಡುಗೈ ದಾನಿ ಸಮಾಜ ಸೇವಕ ಮಂಡ್ಯ ಮಲ್ಲೇಶ್ ಹೇಳಿದರು.
ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ತಿಗಳರಪಾಳ್ಯ ಮುಖ್ಯ ರಸ್ತೆಯ ಅಣ್ಣಮ್ಮ ಸರ್ಕಲ್ ಸಮಾಜ ಸೇವಕ ಮಂಡ್ಯ ಮಲ್ಲೇಶ್ ಅವರ ನೇತೃತ್ವದಲ್ಲಿ “ವಿಶ್ವ ಮಹಿಳಾ ದಿನಾಚರಣೆ” ಮತ್ತು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ದೀರ್ಘಾಯುಷ್ಯ, ದೈನಂದಿನ ಕಾರ್ಯಕ್ಷಮತೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದು ಜೀವನದ ಗುಣಮಟ್ಟವನ್ನು ಹೆಚ್ಚಿಸಿ, ಸಕ್ರಿಯ ಮತ್ತು ಉತ್ಪಾದಕ ಜೀವನ ನಡೆಸಲು, ಹಾಗೂ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದೆ ಎಂದರು.
ಮತ್ತು ಈ ಆರೋಗ್ಯ ಶಿಬಿರಕ್ಕೆ ರಾಯಲ್ ಹೆಲ್ತ್ ಕೇರ್ ಹಾಸ್ಪಿಟಲ್ ಪುಷ್ಯ ಕಣ್ಣಿನ ಆಸ್ಪತ್ರೆ ಸುಶ್ರುತ ರಕ್ತ ನಿಧಿ ಪ್ರಸ್ತೂತಿ ಸಹಯೋಗದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಇದೆ ವೇಳೆ ಉಚಿತ ಕನ್ನಡಕ ವಿತರಿಸಿ ಮಂಡ್ಯ ಮಲ್ಲೇಶ್ ಮನವಿ ಮಾಡಿ ಕೊಂಡರು.
ಈ ಸಂದರ್ಭದಲ್ಲಿ ಹನುಮಂತು, ರಾಘು, ರಾಜಣ್ಣ , ಕುಳ್ಳೇಗೌಡ್ರು , ಶ್ರೀನಿವಾಸ್ , ಅಂಗಡಿ ಮಂಜಣ್ಣ, ಮೂರ್ತಿ, ಸಿದ್ದು, ರವಿ, ನಂಜಪ್ಪ, ಡಿ ಗ್ರೂಪ್ ಅನಂತು, ಹರೀಶ, ದಿಲೀಪ, ದೀಪು, ಮಹಿಳೆಯರು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.




