ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದೆ ಹೆಸರುವಾಸಿಯಾದ ಶಾಸಕ ಎಸ್ ಮುನಿರಾಜು ಸದನದ ಕಲಾಪದಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮತ್ತು ಬಿಡುಗಡೆಯಾಗದ ಅನುದಾನದ ಬಗ್ಗೆ ಚರ್ಚಿಸಿದನ್ನು ಶ್ಲಾಘಿಸಿ ಶುಭ ಕೋರಿದ ರಾಜಗೋಪಾಲ್ ನಗರ ವಾರ್ಡಿನ ಬಿಜೆಪಿ ಮುಖಂಡ ಹಾಗೂ ಸುವರ್ಣ ಕರ್ನಾಟಕ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಮಂಡ್ಯ ರವಿ ರಾಜರಾಜೇಶ್ವರಿ ನಗರ ಫ್ರೆಂಡ್ಸ್ ಸರ್ಕಲ್ನಲ್ಲಿ ಇರುವ ತಮ್ಮ ಪ್ರದಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಹತ್ತು ವರ್ಷ ಅಧಿಕಾರ ಅವಧಿಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡಿದ ಕೀರ್ತಿ ಶಾಸಕ ಮುನಿರಾಜಣ್ಣ ನವರಿಗೆ ಸಲುತ್ತದ್ದೆ. ವಿರೋಧ ಪಕ್ಷದ ಕಿಡಿಗೇಡಿಗಳು ನಮ್ಮ ಶಾಸಕ ಎಸ್ ಮುನಿರಾಜು ಹತ್ತು ವರ್ಷದಲ್ಲಿ ಪಾರ್ಕ್ ಉದ್ಯಾನವನ, ಒಳಚರಂಡಿ, ಬೀದಿ ದೀಪಗಳು ಅದರಲ್ಲಿ ಹೈಮಾಸ್ಟ್ ಲೈಟ್,ರಸ್ತೆಗಳ ಅಭಿವೃದ್ಧಿ, ಶಾಲಾ ಕಾಲೇಜುಗಳ ಕಟ್ಟಡ, ಅಂಗನವಾಡಿ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೀಗೆ ಅನೇಕ ಕ್ಷೇತ್ರದ ಅಭಿವೃದ್ಧಿ ಮಾಡಿದ ನಮ್ಮ ನಾಯಕರಾದ ಶಾಸಕ ಎಸ್ ಮುನಿರಾಜು ಹಲವಾರು ಅಭಿವೃದ್ಧಿಗಾಗಿ ಮಂಜೂರಾಗಿರುವ ಹಣವನ್ನು 14 ತಿಂಗಳಾದರೂ ಹಣ ಬಿಡುಗಡೆ ಮಾಡದೆ ಬಿಜೆಪಿ ಶಾಸಕ ನಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಯನ್ನು ಕುಂಟಿತಗೊಳಿಸಿ ಶಾಸಕನಾದ ನನ್ನ ಮೇಲೆ ಜನಗಳಿಗೆ ತಪ್ಪು ಸಂದೇಶ ರವಾನಿಸಲು ಮತ್ತು ವೈಶಮ್ಯದಿಂದ ಯಾರದ್ದೋ ಮಾತನ್ನು ಕೇಳಿ ಸರ್ಕಾರ ನಡೆಸುತ್ತಿರುವ ಮಂತ್ರಿಗಳು ಮಂಜೂರಾಗಿರುವ ಹಣವನ್ನು ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ.
ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿ ಎಕೆಂದರೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಕೂಲಿ ಕಾರ್ಮಿಕರು ವಾಸವಾಗಿರು ಜನರಿಗೆ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸುವ ಕೆಲಸ ಮುಖ್ಯ ಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚೆತ್ತು ಕೊಂಡು ಅನುದಾನ ಬಿಡುಗಡೆ ಮಾಡಬೇಕೆಂದು ಇಲ್ಲ ದಿದ್ದರೆ ಸರಕಾರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮುಖಂಡ ಮಂಡ್ಯ ರವಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಅಯ್ಯಣ್ಣ ಮಾಸ್ಟರ್