ಚಿಟಗುಪ್ಪ :-ತಾಲೂಕಿನ ಮಂಗಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಂಗಳವಾರ 67ನೇ ವಾರ್ಷಿಕ ಮಹಾಸಭೆ ಜರುಗಿತ್ತು.ಸಭೆಯಲ್ಲಿ 2023-2024ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅಂಬಾಡಿ ಅವರು ಓದಿ ಹೇಳುವ ಮೂಲಕ ವರದಿಯನ್ನು ಮಂಡಿಸಿದರು.ಸಭೆಯಲ್ಲಿ ರೈತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಬಳಿಕ ಪಿಕೆಪಿಎಸ್ ಅಧ್ಯಕ್ಷ ವೈಜೀನಾಥ ವೀರೆಡ್ಡಿ ಮಾತನಾಡಿ,2023-24ನೇ ಸಾಲಿನಲ್ಲಿ ಪಿಕೆಪಿಎಸ್ ಅಧಿಕ ಲಾಭ ಕಂಡುಕೊಂಡಿದೆ.
ರೈತರು ಸಹಕಾರ ನೀಡಿದರಿಂದ ಸಂಸ್ಥೆ ಇಷ್ಟೊಂದು ಲಾಭ ಗಳಿಸಲು ಸಾಧ್ಯವಾಗಿದೆ ರೈತರು ಮುಂದೆಯೂ ಸಹಕಾರ ನೀಡಿದಲ್ಲಿ ಇನ್ನೂ ಹೆಚ್ಚಿನ ಮಟ್ಟಕ್ಕೆ ಸೊಸೈಟಿ ಕೊಂಡೊಯ್ಯಲು ಪ್ರಯತ್ನ ಮದಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ವಿಠ್ಠಲ ರೆಡ್ಡಿ,ಸದಸ್ಯರಾದ ಪ್ರಭುರಾವ ಹಾಲಹಳ್ಳಿ, ಕಂಟೆಪ್ಪಾ ಪಾಟೀಲ,ಜಗನ್ನಾಥರೆಡ್ಡಿ, ಇಬ್ರಾಹಿಂ ಪಟೇಲ್,ತುಳಜಮ್ಮ ಮೇಲಕೇರಿ, ದೇವಿಂದ್ರ ನಿಂಗದಳಿ, ರಮೇಶ ಮಾಲೆಕರ, ಪ್ರಭು ಮೈಸಗೊಂಡ,ಕಮಲರೆಡ್ಡಿ ಗಾರಂಪಳ್ಳಿ ಸೇರಿದಂತೆ ರೈತರು,ಮುಖಂಡರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್