ಬೆಳಗಾವಿ : ಅಪಾರ್ಟ್ಮೆಂಟ್ ಗೆ ನುಗ್ಗಿ ಮಂಗಳಸೂತ್ರ ಕದ್ದು ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಗಣೇಶಪುರದ ಲಕ್ಷ್ಮೀ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಲಕ್ಷ್ಮೀ ನಗರದ ನಿವಾಸಿ ಅಂಜನಾ ಅಜೀತ ದಡ್ಡೀಕರ್(49) ಕೊಲೆಯಾದ ದುರ್ದೈವಿ. ಅಂಜನಾ ಹಾಗೂ ಅಜೀತ ಲಕ್ಷ್ಮಿಪುರದ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರು. ಆಟೋ ಚಲಾಯಿಸಿ ಜೀವನ ಸಾಗಿಸುತ್ತಿದ್ದ ಅಜೀತ್ ದಡ್ಡೀಕರ್ ನಿನ್ನೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಬಂದಾಗ ಕೊಲೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾರನ್ನ ಬೆಳಗಾವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಂಜನಾ ಸಾವನ್ನಪ್ಪಿದ್ದಾರೆ.
ಆಕೆಯ ಕೊರಳಲ್ಲಿದ್ದ ಮಂಗಳಸೂತ್ರ, ಕಿವಿಯೊಲೆ, ಕೈಯಲ್ಲಿ ಬಂಗಾರ ಉಂಗುರ ಕದ್ದು ಕೊಲೆ ಮಾಡಿರುವ ಶಂಕೆ ಇದೆ ಎಂದು ಕುಟುಂಬಸ್ಥರು ಹೇಳಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳ ಮಹಜರ್ ವೇಳೆ ಬೆರಳಚ್ಚು ಸಂಗ್ರಹ ಮಾಡಿದ್ದಾರೆ. ಸ್ಥಳಕ್ಕೆ ಕ್ರೈಮ್ ಡಿಸಿಪಿ ನಿರಂಜನರಾಜೆ ಅರಸ್,ಕ್ಯಾಂಪ್ ಪೊಲೀಸ ಠಾಣಾ ಸಿಪಿಐ ಆಲ್ತಾಫ್ ಮುಲ್ಲಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ