Ad imageAd image

ಬೆಳಗಾವಿಯಲ್ಲಿ 3 ದಿನಗಳ ಕಾಲ ಮಾವು ಮೇಳ

Bharath Vaibhav
ಬೆಳಗಾವಿಯಲ್ಲಿ 3 ದಿನಗಳ ಕಾಲ ಮಾವು ಮೇಳ
WhatsApp Group Join Now
Telegram Group Join Now

ಬೆಳಗಾವಿ : ಮೇ 10 ರಿಂದ ಮೇ 12 ರ ವರೆಗೆ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಮಾವಿನಹಣ್ಣಿನ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮಾವಿನಹಣ್ಣಿನ ಮಾರಾಟ ಮತ್ತು ಪ್ರದರ್ಶನ ನಗರದ ಕ್ಲಬ್ ರಸ್ತೆ ಹ್ಯೂಮ್ ಪಾರ್ಕ್ ನಲ್ಲಿ ನಡೆಯಲಿದೆ. ಸ್ಥಳೀಯ ಮ್ಯಾಂಗೋ ಬ್ರಾಂಡ್ ಮಾವಿನ ಹಣ್ಣುಗಳ ಬಿಡುಗಡೆ ಮಾಡಲಾಯಿತು. ರೈತರಿಗೆ ಸುಲಭದಲ್ಲಿ ಮಾರುಕಟ್ಟೆಯ ಲಾಭ ದೊರಕಿಸುವುದು ಮಾವು ಮೇಳದ ಉದ್ದೇಶವಾಗಿದೆ .

ಮಾವು ಮೇಳದಲ್ಲಿ ಮಹಾರಾಷ್ಟ್ರ, ಕಿತ್ತೂರು, ದೇವಗಡ ,ಮತ್ತು ಇತರ ಪ್ರದೇಶಗಳ ಮಾವಿನ ಮಾರಾಟ ಮತ್ತು ಪ್ರದರ್ಶನ ದಲ್ಲಿ ನಡೆಯಲಿದೆ. ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ರೈತ ಮಾರಾಟ ಮಾಡಬಹುದು.
ತೋಟಗಾರಿಕೆ ಜಿಲ್ಲಾ ಸಹಾಯಕ ನಿರ್ದೇಶಕ ಶಮಂತ ಮಾತನಾಡಿ. ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ತೋಟಗಾರಿಕೆ ಇಲಾಖೆಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ಮತ್ತು ಮಾರುಕಟ್ಟೆ ವ್ಯವಸ್ಥೆ ರಾಜ್ಯ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಿಶ್ಚಿತವಾಗಿಯೂ ತೋಟಗಾರಿಕೆ ಬೆಳೆಗಳಿಗೆ ನೇರ ಮಾರುಕಟ್ಟೆ ದೊರಕಲೆಂದು ಇಂತಹ ಕಾರ್ಯಕ್ರಮಗಳನ್ನು ಮತ್ತು ಮಾರಾಟ ಮಳೆಗೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರದರ್ಶನ ಹಾಗೂ ಮಾರಾಟ ಮಳೆಗೆಯಲ್ಲಿ 50 ಕು ಹೆಚ್ಚು ತಳಿಗಳು ಮಾವಿನ ಹಣ್ಣುಗಳು ಪ್ರದರ್ಶನ ನೀಡಲಾಗಿದೆ. ಬೆಳಗಾವಿ ಮಾವು ಜೊತೆಗೆ ಸುವರ್ಣ ರೇಖಾ, ಜಹಾಂಗೀರ, ಬೈಗನ್ ಪೈರಿ, ಕೇಸರಿ, ಬಾದಾಮ,ಮೊದಲಾದ ತರಿಗಳು ಮಾವಿನ ಹಣ್ಣುಗಳ ಆಕರ್ಷಿಸುತ್ತವೆ ಇನ್ನು ಇದೇ ಸ್ಥಳದಲ್ಲಿ ವನ ದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!