ರಾಜಸ್ಥಾನದ ಮಣಿಕಾ ವಿಶ್ವಕರ್ಮ ‘ಮಿಸ್ ಯೂನಿವರ್ಸ್ ಇಂಡಿಯಾ 2025 ಕಿರೀಟಕ್ಕೆ ಮುತ್ತಿಟ್ಟಿದ್ದಾರೆ.2025 ರ ಮಿಸ್ ಯೂನಿವರ್ಸ್ ಇಂಡಿಯಾ ವಿಜೇತೆಯಾಗಿ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಹೊರ ಹೊಮ್ಮಿದ್ದಾರೆ. ಆಗಸ್ಟ್ 18, ಸೋಮವಾರ ನಡೆದ ಪ್ರತಿಷ್ಠಿತ ಕಿರೀಟವನ್ನು ಗೆದ್ದಿದ್ದಾರೆ.
ಉತ್ತರ ಪ್ರದೇಶದ ತಾನ್ಯಾ ಶರ್ಮಾ ಮೊದಲ ರನ್ನರ್ ಅಪ್, ಹರಿಯಾಣದ ಮೆಹಕ್ ಧಿಂಗ್ರಾ ಎರಡನೇ ರನ್ನರ್ ಅಪ್ ಮತ್ತು ಅಮಿಶಿ ಕೌಶಿಕ್ ಮೂರನೇ ರನ್ನರ್ ಅಪ್ ಆಗಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಣಿಕಾ ವಿಶ್ವಕರ್ಮ ಅವರಿಗೆ 2025 ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ತೊಡಿಸಲಾಗಿದೆ.
ಈ ಭವ್ಯ ಸಮಾರಂಭದಲ್ಲಿ 2024 ರ ಮಿಸ್ ಯೂನಿವರ್ಸ್ ಇಂಡಿಯಾ ರಿಯಾ ಸಿಂಘಾ ಅವರ ಉತ್ತರಾಧಿಕಾರಿಗೆ ಕಿರೀಟ ತೊಡಿಸಲಾಗಿದೆ.
ಈ ನವೆಂಬರ್ನಲ್ಲಿ ಥೈಲ್ಯಾಂಡ್ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.




