ತುಮಕೂರು : ಜಿಲ್ಲಾ ಪಾವಗಡ ತಾಲ್ಲೂಕಿನಲ್ಲಿರುವ y n ಕೋಟೆ ಹೋಬಳಿಯಲ್ಲಿ ಬರುವ ಪೋತಗಾನ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ದಿನಾಂಕ,24/01/25 ಶುಕ್ರವಾರ ಪಾವಗಡ ತಾಲ್ಲೂಕಿನ ಚುನಾವಣೆ ಅಧಿಕಾರಿ ತಹಸಿಲ್ದಾರ್ ವರದರಾಜ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ನಡೆಯಿತು ಪೋತಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು ಗ್ರಾಮ ಪಂಚಾಯತ್ ಸದಸ್ಯರುಗಳು 18 ಸದಸ್ಯರಗಳು ಇದ್ದಾರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಮಂಜುಳ ಮಂಜುನಾಥ್.ಮತ್ತು ಜೆಡಿಎಸ್ ಬೆಂಬಲಿತ ಅಶ್ವಿನಿ ಅಭಿಲೇಶ್ ಇವರಿಬ್ಬರೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಟ್ಟಕ್ಕೆ ನಾಮಿನೇಷನ್ ಹಾಕಿದ್ದರು ಇವರಿಬ್ಬರ ನಡುವೆ ಚುನಾವಣೆ ನಡೆಯಿತು ಇದರಲ್ಲಿ ಕಾಂಗ್ರೆಸ್ ಪಕ್ಷದ ಮಂಜುಳಾ ಮಂಜುನಾಥ್ ಎಂಬುವರು 15 ಮತಗಳನ್ನ ಪಡೆದು ಜಯ ಗಳಿಸಿದರು. ಜೆಡಿಎಸ್ ಪಕ್ಷದ ಅಶ್ವಿನಿ ಅಬಿಲೇಶ್ ಮೂರು ಮತಗಳನ್ನು ಪಡೆದಿರುತ್ತಾರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಮಂಜುಳಾ ಮಂಜುನಾಥ್ ಎಂಬವರು ಮಾತನಾಡಿ ಮಾಜಿ ಸಚಿವ ವೆಂಕಟರಮಣಪ್ಪ ಮತ್ತು ತಾಲೂಕಿನ ಶಾಸಕರು ಇವರ ಸಹಾಯದೊಂದಿಗೆ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದೇನೆ ಎಂದು ಹೇಳಿ ಮತ್ತು ನನ್ನ ಗ್ರಾಮ ಪಂಚಾಯಿತಿಯ ಸದಸ್ಯರಗಳ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರಿಂದ ಆಶೀರ್ವಾದದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿರುತ್ತೇನೆಂದು ಹೇಳಿರುತ್ತಾರೆ ಇದೇ ವೇಳೆಯಲ್ಲಿ ಭಾಗವಹಿಸಿದವರು. ಗ್ರಾಮ ಪಂಚಾಯಿತಿ. ಪಿಡಿಒ ರಫೀಕ್. ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು. ಮತ್ತು ದಿವಕರಪ್ಪ,ಮಹಾಲಿಂಗಪ್ಪ ,Y C ಇಂದ್ರ ಬೆಟ್ಟ. ಪಾರ್ವತಮ್ಮ ರವಿ. ಹನುಮಂತರಾಯ, ಪೋತಗಾನಹಳ್ಳಿ ಜಯರಾಮ,ಆನಂದ ,ಇಂದ್ರಬೆಟ್ಟ ಸೀನ ರಾಮಂಜಿನಪ್ಪ ,ಸುಮನ್ ಶ್ರೀರಾಮಪ್ಪ ದಳವಾಯಿಹಳ್ಳಿ ಗಂಗಪ್ಪ ರಮೇಶ ಹಾಗೂ ಹಲವು ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು….
ವರದಿ: ಶಿವಾನಂದ
ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಮಂಜುಳಾ ಮಂಜುನಾಥ್ 15 ಮತಗಳ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ




