ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ಹಡವನಹಳ್ಳಿ ಗ್ರಾಮದ ಸಾಹಿತಿ, ಕಥೆಗಾರ ವೀರಣ್ಣಗೌಡರು ಬರೆದ ಉರಿವ ದೀಪದ ಕೆಳಗೆ ಕಥಾಸಂಕಲನವು ಜನಮನ ಸೇವಾ ಮತ್ತು ಚಾರಿಟಬಲ್ ಟ್ರಸ್ಟ್ ನೀಡುವ ವಿಚಾರವಾದಿ ಡಾ. ಹೆಚ್.ಎನ್. ನರಸಿಂಹಯ್ಯ ವೈಚಾರಿಕ ಸಾಹಿತಿ ಪ್ರಶಸ್ತಿ ಗೆ ಭಾಜನವಾಗಿದೆ.
ಇದೇ ಜುಲೈ 13 ರಂದು ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಡಾ.ಚಿದಾನಂದ ಮೂರ್ತಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಹಡವನಹಳ್ಳಿ ವೀರಣ್ಣಗೌಡರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಪ್ರಶಸ್ತಿ ಪಡೆದ ಹಡವನಹಳ್ಳಿ ವೀರಣ್ಣಗೌಡರಿಗೆ ಲೇಖಕ ಮಂಜುನಾಥ್ ದಂಡಿನಶಿವರ ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




