ಮುದಗಲ್ಲ : ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ನಿಂದ ಮುದಗಲ್ಲ ಯುವ ಪತ್ರಕರ್ತರಾದ ಮಂಜುನಾಥ ಕುಂಬಾರ ಅವರಿಗೆ ರಾಷ್ಟ್ರಮಟ್ಟದ ಕನ್ನಡ ಕಲರವ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸೇವೆಗಾಗಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸ ಲಾಯಿತು.
ಬೆಳಕು ಸಾಹಿತ್ಯ,ಬೆಳಕು ಸಂಸ್ಥೆಯ ೧೧೯ನೇ ಕಾರ್ಯಕ್ರಮದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕನ್ನಡ ಕಲರವ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ವೇ.ಮೂ. ಶ್ರೀ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು, ರಾಯಚೂರಿನ ಓಂ ಸಾಯಿ ಧ್ಯಾನಮಂದಿರದ ಸಂಸ್ಥಾಪಕ, ಧರ್ಮಾಧಿಕಾರಿಗಳಾದ ಸಾಯಿ ಕಿರಣ್ ಆದೋನಿ ಗುರೂಜಿಯವರ ಜಂಟಿ ನೇತೃತ್ವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವರದಿ: ಮಂಜುನಾಥ ಕುಂಬಾರ