ರಾಯಬಾಗ :ಬೆಳಗಾವಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾದೀಶ ರಾಗಿ ಸನ್ಮಾನ್ಯ ಶ್ರೀ ಮಂಜುನಾಥ ನಾಯಿಕ ಸಾಹೇಬರು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದು ಅದರ ಪ್ರಯುಕ್ತ ಎಲ್ಲಾ ತಾಲೂಕಿನ ನ್ಯಾಯಾಲಯಗಳಿಗೆ ಬೇಟಿಯಾಗಿ ಅಲ್ಲಿನ ಕುಂದುಕೊರತೆಗಳನ್ನ ಸ್ವತಃ ಪರಿಶೀಲಿಸಿ ಅಹವಾಲು ಸ್ವೀಕರಿಸಲು ಮುಂದಾಗಿದ್ದಾರೆ ಅದರಂತೆ ದಿನಾಂಕ 23-11-2025 ರವಿವಾರ ಮುಂಜಾನೆ 11:00 ಘಂಟೆಗೆ ಸರಿಯಾಗಿ ನಮ್ಮ ರಾಯಬಾಗದ ನ್ಯಾಯಾಲಯಕ್ಕೆ ಬೇಟಿ ನೀಡಿದರು.

ಈ ಸಮಯದಲ್ಲಿ ಹಿರಿಯ ದಿವಾನಿ ನ್ಯಾಯಾಲಯ ದ ನ್ಯಾಯಾದೀಶರಾದ ಶ್ರೀ ಜಗದೀಶ ಬಿಸೆರೊಟ್ಟಿ ಕಿರಿಯ ಪ್ರಧಾನ ನ್ಯಾಯಾಲಯದ ನ್ಯಾಯಾದೀಶೆಯಾದ ಕುಮಾರಿ ಪ್ರಿಯಾ ಬಟ್ಟಡ ರವರು ಕೋರ್ಟ್ ಮ್ಯಾನೇಜರ್ ರಾಠೋಡ,ನಮ್ಮ ವಕೀಲರ ಸಂಘದ ಅದ್ಯಕ್ಷರಾದ ಶ್ರೀ ಪಿ ಎಂ ದರೂರರವರು, ಉಪಾಧ್ಯಕ್ಷರಾದ ಶ್ರೀ ಎಸ್ ವ್ಹಿ ಪೂಜೇರಿಯವರು, ಹಿರಿಯ ವಕೀಲರಾದ ಎಲ್ ಬಿ ಚೌಗಲೆ, ಎನ್ ಎಮ್ ಯಡವನ್ನವರ, ಆರ್ ಎಸ್ ಶಿರಗಾಂವೆ, ಆರ್ ಎಚ್ ಗೊಂಡೆ, ಆರ್ ಟಿ ನಾಗರಾಳೆ, ಕೆ ಎಸ್ ಪುಂಡಿಪಲ್ಲೆ, ವಿನಯನಿಧಿ ಕಮಾಲ, ಕೆ ಆರ್ ಕೋಟಿವಾಲೆ,ಶ್ರೀಗೊಂಡ, ಬೖಲಪತ್ತಾರ, ಬಂಡಗರ, ಪಟಾವೆಗಾರ ಮತ್ತು ಇತರೆ ಹಿರಿಯ ಕಿರಿಯ ವಕೀಲರು ಮತ್ತು ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ ಪಿ ಡಬ್ಲ್ಯೂ ಡಿ ಇಂಜಿನಿಯರ್ ಮಣ್ಣ ವಡ್ಡರ, ಶಿವು ಕಾಂಬಳೆ ಗುತ್ತಿಗೆದಾರ ನಜೀರ ಕೆ ಮುಲ್ಲಾ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನೂತನವಾಗಿ ನಿರ್ಮಾಣಗೊಂಡ ವಕೀಲರ ಸಮುದಾಯ ಭವನದ ವೀಕ್ಷಣೆ ಮಾಡಿದರು ನಮ್ಮ ನ್ಯಾಯಾಲಯದ ಇತರೆ ಅವಶ್ಯಕತೆ ಕತೆಗಳ ಅಹವಾಲು ಸ್ವೀಕರಿಸಿ ನಮ್ಮ ಸಂಘದ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ವರದಿ : ಭರತ ಮೂರಗುಂಡೆ




