Ad imageAd image

ಅನೇಕ ಮುಸ್ಲೀಮರು ಇನ್ನೂ ಗುಡಿಸಲಿನಲ್ಲಿದ್ದಾರೆ. ನೀರು, ಟಾಯ್ಲೆಟ್ ಇಲ್ಲ.: ಸತೀಶ್ ಜಾರಕಿಹೊಳಿ 

Bharath Vaibhav
ಅನೇಕ ಮುಸ್ಲೀಮರು ಇನ್ನೂ ಗುಡಿಸಲಿನಲ್ಲಿದ್ದಾರೆ. ನೀರು, ಟಾಯ್ಲೆಟ್ ಇಲ್ಲ.: ಸತೀಶ್ ಜಾರಕಿಹೊಳಿ 
WhatsApp Group Join Now
Telegram Group Join Now

ಹಾವೇರಿ: ರಾಜ್ಯದಲ್ಲಿ ಅನೇಕ ಮುಸ್ಲೀಮರು ಇನ್ನೂ ಗುಡಿಸಲಿನಲ್ಲಿದ್ದಾರೆ. ನೀರು, ಟಾಯ್ಲೆಟ್ ಇಲ್ಲ. ನಾವು ಮುಸ್ಲಿಮರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ ಎಂಬುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಾತಿಗಣತಿ ವಿಚಾರದಲ್ಲಿ ನಮ್ಮದೂ ಲೋಪವಿದೆ.ಜಾತಿಗಣತಿ ಮಾಡಿ 11 ವರ್ಷ ಆಗಿದೆ. ಹಾಗಾಗಿ ಹೊಸದಾಗಿ ಮಾಡ್ತಿದ್ದೇವೆ ಎಂದರು.

ಆಯಾ ಜಾತಿಯವರಿಗೆ ಇನ್ನೊಂದು ಸಲ ಮನವರಿಕೆ ಮಾಡಿಕೊಡ್ತೇವೆ. ನಿಮ್ಮ ನಿಮ್ಮ ಜಾತಿ ಸರಿಯಾಗಿ ಬರೆಸಿ ಅಂತಾ ಮನವರಿಕೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ನಿಂದ ಮುಸ್ಲಿಂ ತುಷ್ಠೀಕರಣ ಹೆಚ್ಚಾಗಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಸಂಸದ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ ಮುಸ್ಲೀಮರು ಇನ್ನೂ ಗುಡಿಸಲಿನಲ್ಲೇ ಇದ್ದಾರೆ. ನೀರು, ಟಾಯ್ಲೆಟ್ ಇಲ್ಲ. ನಾವು ಮುಸ್ಲೀಮರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ ಎಂದರು.

ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥನೆ ಮಾಡಲು ಆಗಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!