ಬೆಳಗಾವಿ : ಮರಾಠಿಯಲ್ಲಿ ಮಾತನಾಡಲಿಲ್ಲವೆಂದು ಗ್ರಾಮ ಪಂಚಾಯಿತಿ ಪಿಡಿಓ ಗೆ ಅವಾಚ್ಯ ಶಬ್ದಗಳಲ್ಲಿ ಬೈದಿದ್ದ ಮರಾಠಿ ಕುಡುಕ ಗೂಂಡಾನನ್ನು ಬಂಧಿಸಿ ಒಳಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಣೆ ಗ್ರಾಮದ ತಿಪ್ಪಣ್ಣ ಡೋಕ್ರೆ ಎರಡು ದಿನಗಳ ಹಿಂದಷ್ಟೇ ಮದ್ಯ ಸೇವನೆ ಮಾಡಿ ಬಂದು ಪಿಡಿಒ ನಾಗೇಂದ್ರ ಪತ್ತಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕನ್ನಡಿಗರು ಕೆರಳಿ ಆತನ ಬಂಧನಕ್ಕೆ ಒತ್ತಾಯಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಚೇರಿಗೆ ತೆರಳಿ ಪಿಡಿಒ ನಾಗೇಂದ್ರ ಪತ್ತಾರ್ ಅವರನ್ನು ಸನ್ಮಾನಿಸಿ ನೈತಿಕ ಧೈರ್ಯ ತುಂಬಿದ್ದಲ್ಲದೇ, ಚಿಲ್ಲರೆ ಗೂಂಡಾ ತಿಪ್ಪಣ್ಣ ಬಂಧನಕ್ಕೆ ಆಗ್ರಹಿಸಿದ್ದರು. ಈಗ ಬೆಳಗಾವಿ ಪೊಲೀಸರು ತಿಪ್ಪಣ್ಣನನ್ನು ತಿಪ್ಪೆಯಿಂದ ಎತ್ತಿ ತಂದು ಹಿಂಡಲಗಾ ಜೈಲಿಗೆ ಬಿಸಾಕಿದ್ದಾರೆ.