—————————————-ಚಾಲನೆ ನೀಡಿದ ಡಿ ಎಸ್‌ಪಿ ದತ್ತಾತ್ರೇಯ ಕಾರ್ನಾಡ್
ಲಿಂಗಸ್ಗೂರು : ಭಾರತ ರತ್ನ ಸರ್ದಾರ್ ವಲ್ಲಭಭಾಯ್ ಪಾಟಿಲ್ ರವರ 150ನೇ ಜಯಂತಿಯ ಅಂಗವಾಗಿ ರಾಷ್ಟ್ರೀಯ ಏಕತಾ ದಿನ ಅಂಗವಾಗಿ ಹಟ್ಟಿ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ನೇತೃತ್ವದಲ್ಲಿ ಇಂದು ಹಟ್ಟಿ ಪಟ್ಟಣದ ಪಾಮನ ಕಲ್ಲೂರ್ ಕ್ರಾಸ್ ನಿಂದ ಹಟ್ಟಿ ಪೊಲೀಸ್ ಠಾಣೆಯವರಿಗೆ ಶ್ರೀ ವಿನಾಯಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಪೊಲೀಸ್ ಸಿಬ್ಬಂದಿಯೊಂದಿಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ ರ್‍ಯಾಲಿ ಗೆ ಲಿಂಗಸುಗೂರು ಡಿ ವೈ ಎಸ್ ಪಿ ದತ್ತಾತ್ರೇಯ ಕಾರ್ನಾಡ್ ಚಾಲನೆ ನೀಡಿದರು
ಹಟ್ಟಿ ಪಟ್ಟಣದ ಪಾಮನ ಕಲ್ಲೂರ್ ಕ್ರಾಸ್ ನಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಡಿ ವೈ ಎಸ್ ಪಿ ದತ್ತಾತ್ರೇಯ ಕಾರ್ನಾಡ್,ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ,ಪಿ ಎಸ್ ಐ ಧರ್ಮಣ್ಣ, ಎ ಎಸ್ ಐ, ಹಾಗೂ ಪೊಲೀಸ್ ಸಿಬ್ಬಂದಿ ಓಟದ ಮೂಲಕ ಹಟ್ಟಿ ಪೊಲೀಸ್ ಠಾಣೆ ತಲುಪಿದರು ನಂತರ ಓಟದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಯರಿಗೆ ಅಭಿನಂದನೆಗಳು ತಿಳಿಸುತ್ತಾ ಪ್ರಥಮ, ದ್ವಿತೀಯ, ತೃತೀಯ ಓಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯಲ್ಲಿ ಇರುವ ರಿವರ್ ಬಂದೂಕುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾ ಅಪರಾಧ ಕೃತಿಯಲ್ಲಿ ಭಾಗವಹಿಸಿದವರಿಗೆ ಎಫ್ ಐ ಆರ್ ಮತ್ತು ಗುಂಡ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಯಾವ ವಿದ್ಯಾರ್ಥಿಯು ಇಂಥ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸದೆ ವಿದ್ಯಾವಂತರಾಗಿ ತಂದೆ ತಾಯಿಗೆ ತಕ್ಕ ಮಕ್ಕಳಾಗಿ ಗುರುವಿಗೆ ಒಳ್ಳೆ ಶಿಷ್ಯನಾಗಿ ನಾಡಿನ ಹೆಸರು ತರುವ ಉತ್ತಮ ವ್ಯಕ್ತಿಯಾಗಬೇಕೆಂದರು
ನಂತರ ವಿದ್ಯಾರ್ಥಿಗಳಿಗೆ ಠಾಣೆಯ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ ಶ್ರೀ ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನರಸಪ್ಪ ಯಾದವ್, ವಕೀಲರಾದ ಶಂಸುದ್ದೀನ್ ಸೇರಿದಂತೆ ಇನ್ನು ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




