ಬೆಳಗಾವಿ: ತಾಲೂಕಿನ ಹಂದಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಆಯೋಜಿಸಿದ ಮಾರ್ಕೆಟ್ ಡೇ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ್ ಪಾಟೀಲ್ ಮಾರ್ಕೆಟ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದು ಒಂದು ಹೊಸ ವಿನೋತನ ಕಾರ್ಯಕ್ರಮವನ್ನು ಶಶಿಕಾಂತ್ ಎಜುಕೇಶನ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ವಿನಿತ್ ವಿದ್ಯಾಮಂದಿರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ
ವಿನೀತ್ ವಿದ್ಯಾ ಮಂದಿರ್ ಆಂಗ್ಲ ಭಾಷೆ ಶಾಲೆಯಲ್ಲಿ ಚಿನ್ನರ ಸಂತೆ ಕಾರ್ಯಕ್ರಮದಲ್ಲಿ ವಿನೀತ್ ವಿದ್ಯಾ ಮಂದಿರ ವಿದ್ಯಾರ್ಥಿಗಳು ತಮ್ಮ ಹೊಲಗದ್ದೆಗಳಲ್ಲಿ ಬೆಳೆದಿರುವಂತ ತರಕಾರಿ ಹಾಗೂ ಇತರ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ವಿದ್ಯಾರ್ಥಿಗಳು ತಮ್ಮ ಪೋಷಕರಗಳ ಜೊತೆ ಆಗಮಿಸಿ ಚಿನ್ನರ ಸಂತೆಯಲ್ಲಿ ವಿವಿಧ ವಸ್ತುಗಳನ್ನು ಖರೀದಿ ಮಾಡಿದರು. ಹಾಗೂ ವಿದ್ಯಾರ್ಥಿಗಳಿಗೆ ದಿನನಿತ್ಯದ ವ್ಯಾಪಾರ ಮತ್ತು ಜೀವನ ಶೈಲಿಯ ಕುರಿತು ತಿಳುವಳಿಕೆ ನೀಡುವುದು ಮತ್ತು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು ಧಾನ್ಯ ವಸ್ತುಗಳು ಹಾಗೂ ವಿವಿಧ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಶಾಲೆಯ ಹೆಚ್ ಎಂ ಗೀತಾ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವ ರೀತಿ ವ್ಯಾಪಾರ ವ್ಯವಹಾರ ನಡೆಯುತ್ತಿದೆ ಎಂಬುದು ಶಾಲಾ ಮಕ್ಕಳಿಗೆ ತಿಳಿಸುವ ಇದರ ಉದ್ದೇಶವಾಗಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರ ಆಗಿರುವುದರಿಂದ ಹೊಲಗದ್ದೆಗಳಲ್ಲಿ ಬೆಳೆದಿರುವಂತಹ ಪದಾರ್ಥಗಳನ್ನು ಮಾರುಕಟ್ಟೆ ಕಳಿಸುವುದು ಹಾಗೂ ಮಾರಾಟ ಮಾಡುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಜಕವಾಗಿ ಈ ಮುಖಾಂತರ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರಗಳ ಜೊತೆ ಚಿನ್ನರ ತಂತೆಯಲ್ಲಿ ಭಾಗವಹಿಸಿದ್ದರು ಹಾಗೂ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಬೆಳಗಾವಿ ಸಂಸ್ಥಾಪಕರಾದ ಶಶಿಕಾಂತ ಪಾಟೀಲ ಹಾಗೂ ಪ್ರಗತಿಪರ ರೈತರು ಶಾಲಾ ಶಿಕ್ಷಕ ವರ್ಗ ವಿದ್ಯಾರ್ಥಿಗಳು ಮತ್ತು ಪೋಷಕರು ಚಿನ್ನರ ಸಂತೆಯಲ್ಲಿ ಭಾಗವಹಿಸಿದ್ದರು
ವರದಿ: ಪ್ರತೀಕ ಚಿಟಗಿ