ಒಂದು ಗಂಡು, ಒಂದು ಹೆಣ್ಣು ಮದುವೆ ಎಂಬ ಸಂಬಂಧದಲ್ಲಿ ಬಂಧಿಯಾಗಿ ಜೀವನ ಸಂಗಾತಿಗಳಾಗುವುದು, ಜೀವನ ಸಾಗಿಸುವುದು ಲೋಕಾರೂಢಿ. ದಂಪತಿಗಳಾಗುವವರಲ್ಲಿ ವಯಸ್ಸಿನ ಅಂತರ ಎಷ್ಟಿರಬೇಕು ಎಂಬುದರ ಕುರಿತು ವಿವಿಧ ವಯಸ್ಸಿನ ಅಂತರವನ್ನು ಕೆಲವರು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ಗಂಡ 3-5 ವರ್ಷ ದೊಡ್ಡವನಿರುವುದು ಸಾಮಾನ್ಯ.
ಮದುವೆಯಾಗಲು ಗಂಡಸಿಗೆ 21 ವರ್ಷ, ಹೆಂಗಸಿಗೆ 18 ವರ್ಷ ವಯಸ್ಸಾಗಿರಬೇಕೆಂಬುದು ಸರಕಾರದ ಕಡ್ಡಾಯ ನಿಯಮ. ಆದರೆ ಕೆಲವೊಂದು ಬಾರಿ ಗಂಡನಿಗಿಂತ ಹೆಂಡತಿಯ ಯವಸ್ಸು ಹೆಚ್ಚಿರುವ ಉದಾಹರಣೆಗಳು ಕೂಡ ಇವೆ. ಅವರು ಕೂಡ ಸುಖ ಜೀವನ ನಡೆಸುತ್ತಿದ್ದಾರೆ.
ಆದರ್ಶ ಜೀವನ ನಡೆಸಲು ಗಂಡ ಹೆಂಡತಿಯರ ನಡುವೆ ವಯಸ್ಸಿನ ವ್ಯತ್ಯಾಸ ಹೆಚ್ಚಿನ ವ್ಯತ್ಯಾಸ ಮಾಡದು. ಬದಲಿಗೆ ಅವರ ನಡುವಿನ ಹೊಂದಾಣಿಕೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಎಂಗೇಜ್ ಮೆಂಟ್ ಮ್ಯಾರೆಜ್ ಗಳಲ್ಲಿ ಗಂಡನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರುವುದು ಸಾಮಾನ್ಯ. ಆದರೆ ಲವ್ ಮ್ಯಾರೆಜ್ ಗಳಲ್ಲಿ ಹುಡುಗ- ಹುಡುಗಿಯ ನಿರ್ಧಾರಗಳೇ ಪ್ರಮುಖ ಪಾತ್ರ ವಹಿಸುವುದರಿಂದ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ.
ಹಳೆಯ ಕಾಲದಲ್ಲಿ ನಡೆಯುವ ಮದುವೆಗಳಲ್ಲಿ ಗಂಡಸಿನ ವಯಸ್ಸು ಹೆಂಗಸಿನ ವಯಸ್ಸಿಗಿಂತ ಜಾಸ್ತಿ ಇರುವುದು ಸಾಮಾನ್ಯ ವಾಗಿತ್ತು. ಅದು 10 ರಿಂದ 15 ವರ್ಷಗಳ ಅಂತರವೂ ಇರುತ್ತಿದ್ದವು. ಇಷ್ಟೆಲ್ಲದ ಮಧ್ಯೆ ಗಂಡ- ಹೆಂಡತಿ ಸುಖ ಜೀವನ ನಡೆಸಲು ಹೊಂದಾಣಿಕೆಯೇ ಪ್ರಮುಖ ಪಾತ್ರ ವಹಿಸುತ್ತಿದೆಯೇ ಹೊರತು. ವಯಸ್ಸಲ್ಲ. ಆದರೆ ಶಾಸ್ತ್ರೋಕ್ತವಾಗಿ ಹೆಣ್ಣಿಗಿಂತ ಗಂಡಿನ ವಯಸ್ಸು ಜಾಸ್ತಿ ಇರಬೇಕೆಂಬುದು ಅನುಭವಸ್ತರ ಮಾತು.