ಸಿಂಧನೂರು : ಜುಲೈ 22 ತಾಲೂಕಿನ ಜಾಲಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹನುಮಾಪುರ ಗ್ರಾಮದಲ್ಲಿ ಅನಧಿಕೃತವಾಗಿ ತಿಪ್ಪೆ, ಬಣವೆ ಹಾಕಿಕೊಂಡಿದ್ದು ಇದರಿಂದ ಸೊಳ್ಳೆ, ನೊಣ, ಒಳಗೊಂಡಂತೆ ಹಾವು, ಚೋಳುಗಳು ಕಾಟ ಹೆಚ್ಚಾಗಿದ್ದು ಕೂಡಲೇ ಇವುಗಳನ್ನು ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯತ ಸದಸ್ಯ ಮಾರುತಿ.ಡಿ ಆಗ್ರಹಿಸಿದ್ದಾರೆ
ತಾಲೂಕು ಪಂಚಾಯತಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಾಲಿಹಾಳ ಗ್ರಾಮ ಪಂಚಾಯತ ಸದಸ್ಯ ಹನುಮಾಪುರ ಗ್ರಾಮದಲ್ಲಿ ಬರುವ ಸರ್ಕಾರಿ ಗಾಂವಠಾಣ ಜಾಮೀನು ಸುಮಾರು 5 ಎಕರೆ ಇದ್ದು ಇದರು ಸುತ್ತಲೂ ಅನಧಿಕೃತವಾಗಿ ತಿಪ್ಪೆ , ಬಣವೆ ಹಾಕಿಕೊಂಡಿದ್ದು ಇದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ನನ್ನ ಬಳಿ ಮನವಿ ಮಾಡಿಕೊಳ್ಳುತ್ತಿದ್ದು.
ಈ ಹಿನ್ನಲೆ ಗ್ರಾಮಸ್ಥರ ಸಹಿಯೊಂದಿಗೆ ಜಾಲಹಳ್ಳಿ ಗ್ರಾಮ ಪಂಚಾಯತ ಪಿಡಿಒ ಮಲ್ಲೇಶ್ ಅವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗುತ್ತಿಲ್ಲ ಈ ಹಿನ್ನಲೆ ಸಿಂಧು ಸಿಂಧನೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹೇಳಿದರೆ.
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಗ್ರಾಮ ಪಂಚಾಯತಿ ವತಿಯಿಂದ ಮಾಡಿಸಿ ಒಂದು ವೇಳೆ ಅವರು ಕ್ರಮಕ್ಕೆ ಮುಂದಾಗದಿದ್ದರೆ ನಮಗೆ ದೂರು ಸಲ್ಲಿಸಿ ಎಂದು ಹೇಳುತ್ತಿರುವುದು ಎಷ್ಟು ಸರಿ?.
ಈ ಅನಧಿಕೃತ ತಿಪ್ಪೆ ಬಣವೆಗಳಿಂದ ನೊಣ ಸೊಳ್ಳೆ ಮಳೆ ಬಂತು ಎಂದರೆ ಗಲೀಜು ನೀರು ಜೊತೆಗೆ ಹಾವು , ಚೋಳು ಗಳ ಕಾಟ ಹೆಚ್ಚಾಗುತ್ತಿದ್ದು ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡಲು ಸಾಧ್ಯತೆ ಖಚಿತ ಕೂಡಲೇ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅನಧಿಕೃತ ತಿಪ್ಪೆ, ಬಣವೆಗಳನ್ನೂ ತೆರವುಗೊಳಿಸಲು ಮುಂದಾಗಬೇಕು ತಪ್ಪಿದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.




