Ad imageAd image

ಬೆಳಗಾವಿ ದೇವಾಂಗ ಸಮಾಜದಿಂದ ಜರುಗಿದ ಸಾಮೂಹಿಕ ಗುಗ್ಗಳ ಕಾರ್ಯಕ್ರಮ

Bharath Vaibhav
ಬೆಳಗಾವಿ ದೇವಾಂಗ ಸಮಾಜದಿಂದ ಜರುಗಿದ ಸಾಮೂಹಿಕ ಗುಗ್ಗಳ ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ: ನಗರದ ದೇವಾಂಗ ಮಠ ರೋಡ ನಲ್ಲಿ ದೇವಾಂಗ ಹಟ್ಗರ್ ಸಮಾಜದ ವತಿಯಿಂದ ದೇವಾಂಗ ಮಠದಲ್ಲಿ ಮಂಗಳವಾರ ಸಾಮೂಹಿಕ ಗುಗ್ಗುಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 7 ಗಂಟೆಯಿಂದ ಕಾರ್ಯಕ್ರಮವು ಸಕಲ ವಾದ್ಯ ಮೇಳದೊಂದಿಗೆ ಪ್ರಾರಂಭವಾಗಿ ಖಡೆ ಬಜಾರ್ ಗಣಪತಿ ಗಲ್ಲಿ ಕಡಲೇಕರ್ ಗಲ್ಲಿ ಮತ್ತು ದೇವಸ್ಥಾನದವರೆಗೆ ಮೆರವಣಿಗೆಯ ಮೂಲಕ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 90 ಭಕ್ತಾದಿಗಳು ತಮ್ಮ ಗುಗ್ಗುಳ ಕಾರ್ಯಕ್ರಮವನ್ನು ಮಾಡಿಕೊಂಡರು ಮೆರವಣಿಗೆಯ ಉದ್ದಕ್ಕೂ ರಸ್ತೆಯ ಮಧ್ಯದಲ್ಲಿ ಶ್ರೀ ವೀರಭದ್ರನ ಒಡಪುಗಳು ಹಾಕುತ್ತ ಭಕ್ತಾದಿಗಳು ಕುಣಿಯುತ್ತ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು. ನಂತರ ದೇವಸ್ಥಾನದ ಒಳಗಡೆ ಮುತ್ತೈದೆಯರಿಗೆ ಉಡಿ ತುಂಬಿ ಪುರವಂತರಿಗೆ ಪೂಜೆ ಪುನಸ್ಕಾರ ಮಾಡಿ ಮಹಾಪ್ರಸಾದವನ್ನು ವಿತರಿಸಿದರು.

ಸಾರ್ವಜನಿಕರಿಗಾಗಿ ಶ್ರೀ ಬನಶಂಕರಿ ದೇವಸ್ಥಾನ ಬಡಕಲಗಲ್ಲಿಯಲ್ಲಿ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಮಿಟಿಯ ಸದಸ್ಯರಾದ ಅಶೋಕ್ ಹಣಬರಟ್ಟಿ, ಅಧ್ಯಕ್ಷರು ಪ್ರಶಾಂತ್ ಕುಲ್ಗೋಡ್, ಉಪ್ಪಧ್ಯಕ್ಷರು ಸಂತೋಷ್ ತೊಪ್ಪಗಿ, ಕಿಶೋರ್ ಬಡಗಾವಿ , ಚಂದ್ರಶೇಖರ್, ಉಮೇಶ್ ಚಿಟಗಿ, ರಾಜೇಂದ್ರ ಚಿಟಗಿ, ನಾರಾಯಣ ಕುಲಗೋಡ್, ವಿನಯ್ ಮಾಳಗಿ , ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಸಹಕರಿಸಿದ ಹೆಸ್ಕಾಂ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಕಾರ್ಪೊರೇಟರ್ ಗಳಿಗೆ ಕಮಿಟಿ ವತಿಯಿಂದ ಧನ್ಯವಾದಗಳು ತಿಳಿಸಿದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!