ತುಮಕೂರು : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯ ಗ್ರಾಮದಲ್ಲಿ ನಡೆದಿದೆ. ಜೂ. 9 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಿಗಳು ಯುವತಿಗೆ ಪರಿಚಿತರೇ ಆಗಿದ್ದರು.ಜೂ. 9 ರಂದು ರಾತ್ರಿ ಆಕೆಯನ್ನು ನಿನ್ನೊಡನೆ ಮಾತನಾಡ ಬೇಕಿದೆ ಎಂದು ಕರೆಸಿಕೊಂಡಿದ್ದರು. ಯುವತಿ ಬಂದೊಡನೆ ಆಕೆಯ ಬಾಯಿಗೆ ಬಟ್ಟೆ ತುರುಕಿ ನಿರ್ಜನ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಅತ್ಯಾಚಾರ ನಡೆಸಿದ ಬಳಿಕ ಆಕೆಗೆ ಜೀವ ಬೆದರಿಕೆ ಹಾಕಿದ್ದರಿಂದ ಯುವತಿ ಭಯದಿಂದ ದೂರು ನೀಡಿರಲಿಲ್ಲ. ಒಂದು ತಿಂಗಳ ಬಳಿಕ ತನ್ನ ಪೋಷಕರೊಂದಿಗೆ ನೋವು ಹಂಚಿಕೊಂಡಿದ್ದಳು.
ದೂರನ್ನಾಧರಿಸಿ ಪೊಲೀಸರು ಲಿಖಿತ್, ವಿಜಯಾನಂದ ಮತ್ತು ಆತನ ಸ್ನೇಹಿತನೊಬ್ಬ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.



