Ad imageAd image

ಶ್ರೀ ಚಂದ್ರಗಿರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Bharath Vaibhav
ಶ್ರೀ ಚಂದ್ರಗಿರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
WhatsApp Group Join Now
Telegram Group Join Now

ಪರಮ ಪೂಜ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಶುಭಾಶಿರ್ವಾದಗಳೊಂದಿಗೆ ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಕಾಗವಾಡ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಭರಗಿ ವಲಯದ ಕಾರ್ಯಕ್ಷೇತ್ರದ ಶ್ರೀ ಚಂದ್ರಗಿರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕಾಗವಾಡ ತಾಲೂಕಿನ ಯೋಜನಾಧಿಕಾರಿಗಳಾದ ಸಂಜೀವ ಮರಾಠಿ ಕಾಗವಾಡ ಅವರು ಯೋಜನಾ ಕಚೇರಿಯ ಪರಿಚಯ ಹಾಗೂ ಸಂಘದ ಸಾಧನೆಯನ್ನು ತಿಳಿಸುದರ ಜೊತೆಗೆ ಸಾಮಾಜಿಕ ಆರ್ಥಿಕ ಶಿಸ್ತು ಗುಣಮಟ್ಟದ ನಿರ್ವಹಣೆ, ಹಾಗೂ ಸಾಮಾಜಿಕ ಕಳಕಳಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಲ್ಲಿ ಸಂಘದ ಪಾತ್ರದ ಕುರಿತು ಯೋಜನೆ ಬೆಳೆದು ಬಂದ ದಾರಿ ಸ್ವಸಹಾಯ ಸಂಘಗಳ ಮಹತ್ವ ಬ್ಯಾಂಕಿನ ಮೂಲಕ ಬಿ ಸಿ ಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಸಂಘದ ಸದಸ್ಯರಿಗೆ ಬ್ಯಾಂಕ್ ನಿಂದ ಪ್ರಗತಿನಿಧಿ ತೆಗಿಸಿಕೊಡುವುದು ಧರ್ಮಸ್ಥಳ ಸಂಸ್ಥೆಯಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ರೀತಿಯಿಂದ ಸಾಲ ಮರುಪಾವತಿ ಸಾಲದ ವಿನಿಯೋಗ ಮಾಡಿಕೊಂಡು ಸಂಘವನ್ನು ಉತ್ತಮವಾಗಿ ನೋಡಿಕೊಳ್ಳುವುದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಿಂದ ಪ್ರತಿ ಕುಟುಂಬಗಳಲ್ಲಿ ಧಾರ್ಮಿಕ ಮಹತ್ವ ಹಾಗೂ ಕುಟುಂಬ ಮಕ್ಕಳಿಗೆ ಧಾರ್ಮಿಕದ ಬಗ್ಗೆ ಮಹತ್ವ ಅವರಿಗೆ ಉತ್ತಮ ಶಿಕ್ಷಣ ನೀಡುವ ಸಂಸ್ಕಾರ ನೀಡುವಂತೆ ಮಾಹಿತಿ ಮಾರ್ಗದರ್ಶನ ನೀಡಿದರು ದಿವ್ಯ ಸಾನಿದ್ಯ ಶ್ರೀ ಬಸವರಾಜ ಶರಣರು ಝುಂಜರವಾಡ ಮಠ ಅವರು ಮಾತನಾಡಿ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಅದ್ಭುತವಾದ ಶಕ್ತಿಯಾಗಿ ನಿಂತಿದ್ದಾರೆ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ನೀಡಿ ಬಡವರ ಬಾಳಿಗೆ ದಾರಿ ದೀಪವಾಗಿದ್ದಾರೆ ಎಂದರೂ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಧಾರ್ಮಿಕ ಮನೋಭಾವ ಬೆಳೆಯುತ್ತದೆ ಇಂತಹ ಕಾರ್ಯಕ್ರಮಗಳನ್ನು ಈಗಿನ ಪೀಳಿಗೆಗೆ ಬಹಳ ಮುಖ್ಯ ಪರಮ ಪೂಜ್ಯರು ಸಮಾಜದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಸಮಾಜಮುಖಿ ಚಿಂತನೆಗಳು ಅದ್ಭುತವಾಗಿವೆ ಅದರ ಉಪಯೋಗ ಪಡೆದು ಜೀವನ ಅಭಿವೃದ್ಧಿ ಪಡಿಸಿಕೊಳ್ಳಿ ಎಂದು ಅಶೀರ್ವಚನ ನೀಡಿದರು.

ಮುಖ್ಯ ಅಥಿತಿಗಳಾಗ ಅಬ್ದುಲ ಮುಲ್ಲಾ ತಮ್ಮಣ್ಣ ಪೂಜಾರಿ ವಿಲಾಸ ಟೋಣಿ ರವಿ ವಾಘ್ಮೊರೆ ತುಕಾರಾಮ ಮಾಳಿ ಮಂದಾ ಕಾಂಬಳೆ ಮಿಥುನ ಕಾಂಬಳೆ ರಾಜು ಕಾಂಬಳೆ ಸುಷ್ಮಾ ನಿಲಜಗಿ ಅಮೃತ ಮಿಶಾಳೆ ವಿಠ್ಠಲ ಗುರವ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳ ವಲಯದ ಮೇಲ್ವಿಚಾರಕರಾದ ವಲಯದ ಸೇವಾ ಪ್ರತಿನಿಧಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಊರಿನವರು ಉಪಸಿತರಿದ್ದರು

ವರದಿ : ಸುಕುಮಾರ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!