Ad imageAd image

ರಾಜಗೋಪಾಲನಗರ ವಾರ್ಡ್ ನಲ್ಲಿ ಎನ್ ಡಿ ಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಭರ್ಜರಿ ಪ್ರಚಾರ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: –ಪೀಣ್ಯ,ದಾಸರಹಳ್ಳಿ ಬಿಜೆಪಿ ಮುಖಂಡ ದಿನೇಶ್,ಮಾಜಿ ನಗರಸಭಾ ಸದಸ್ಯ ಶಿವಣ್ಣ ಮತ್ತು ಮಾಜಿ ವಾರ್ಡ್ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ರಾಜಗೋಪಾಲನಗರ ವಾರ್ಡ್ ನ ಬಸಪ್ಪನಕಟ್ಟೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಶ್ರೀ ದುಗ್ಗಲಮ್ಮ ದೇವಿಗೆ ಪೂಜಾ ಪುನಸ್ಕಾರ ಸಲ್ಲಿಸಿ.ಬಿಜೆಪಿ ಜೆಡಿಎಸ್ ಮುಖಂಡರು ಮಹಿಳೆಯರು ಅಪಾರ ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ತೆರಳಿ ಎನ್ ಡಿ ಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಮತ ನೀಡುವಂತೆ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ರಾಜಗೋಪಾಲನಗರ ವಾರ್ಡ್ ನ ಬಿಜೆಪಿ ಮುಖಂಡರಾದ ದಿನೇಶ್, ‘ಆದ್ದರಿಂದ ನಾವೆಲ್ಲರೂ ಬೂತ್ ಮಟ್ಟದಲ್ಲಿ ನರೇಂದ್ರ ಮೋದಿಯವರ ಆಡಳಿತದಲ್ಲಿ ವಿಶ್ವವು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೇಶದ ಭದ್ರತೆ ವಿಷಯ ಬಂದಾಗ ಭಾರತೀಯರ ಆಯ್ಕೆ ಬಿಜೆಪಿ ಆಗಿರುತ್ತದೆ. ಹಾಗೆಯೇ ನಾವೆಲ್ಲರೂ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ನಮ್ಮ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ’, ಎಂದು ಹೇಳಿದರು.

ಮಾಜಿ ನಗರಸಭಾ ಸದಸ್ಯ ಹಾಗೂ ಜೆಡಿಎಸ್ ಹಿರಿಯ ಮುಖಂಡ ಶಿವಣ್ಣ ಮಾತನಾಡಿ, ‘ಜನರ ತೆರಿಗೆಯ ಹಣವನ್ನು ಪೋಲು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ದೂರ ಇಡಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಒಂದಾಗಿ ಪ್ರಚಾರ ಮಾಡುತ್ತಿದ್ದೇವೆ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಅಧಿಕಾರ ಹಿಡಿಯುವುದು ಶತಸಿದ್ಧ’, ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್ , ವಿಜಯ ಕುಮಾರ್ ಕಂಪ್ಯೂಟರ್,ಹಿರಿಯ ಮುಖಂಡ ಡಬಲ್ ರಾಮಣ್ಣ, ಭೈರಪ್ಪ, ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಮಹಿಳೆಯರು ಕಾರ್ಯಕರ್ತರು ಇದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!