Ad imageAd image

“ಸರ್ಕಾರದ ನಡೆ ಕಾರ್ಯಕರ್ತರ ಕಡೆ ಬೃಹತ್ ಸಮಾವೇಶ.”

Bharath Vaibhav
“ಸರ್ಕಾರದ ನಡೆ ಕಾರ್ಯಕರ್ತರ ಕಡೆ ಬೃಹತ್ ಸಮಾವೇಶ.”
WhatsApp Group Join Now
Telegram Group Join Now

ಮೊಳಕಾಲ್ಮೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಮನೆಬಾಗಿಲಿಗೆ ಮುಟ್ಟಿವೆ ಇದರಿಂದ ಎಷ್ಟೋ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.

ಶುಕ್ರವಾರ ಹಾನಗಲ್ ಹೈಬಿನಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಸರ್ಕಾರದ ಆದೇಶದಂತೆ ಸರ್ಕಾರ ಬಂದು ಎರಡು ವರ್ಷ ಆಗಿದೆ ಆದರಿಂದ ಕಾರ್ಯಕರ್ತರನ್ನು ಉದ್ದೇಶಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ನಿಮ್ಮೆಲ್ಲರ ಸಹಕಾರ ಇರಬೇಕು, ಅದೇ ರೀತಿ ನಾಲ್ಕು ಹೋಬಳಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮಾಡಲು ಬಯಸಿದ್ದೇವೆ, ಪಂಚ ಯೋಜನೆಗಳಿಂದ ಸ್ವಲ್ಪ ತೊಂದರೆ ಆಗಿರಬಹುದು ಮುಂದಿನ ಮೂರು ವರ್ಷ ಅಭಿವೃದ್ಧಿಯತ್ತ ಸರ್ಕಾರ ಸಾಗುತ್ತಿದೆ ಸರ್ಕಾರದ ಸಾಧನ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ತಿಳಿ ಹೇಳಬೇಕು, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಪಡಿಸಬೇಕು ಅದೇ ರೀತಿ ನಾವು ಚುನಾವಣೆಯಲ್ಲಿ ಜಯಭೇರಿ ಬಾರಿಸಬೇಕು. ಈ ಭಾಗದಿಂದ ಉತ್ತಮ ಸಂದೇಶವನ್ನು ಹೈಕಮಾಂಟಿಗೆ ಕಳಿಸಬೇಕು ಎಂದು ಕಾರ್ಯಕರ್ತರ ಜೊತೆ ಮಾತನಾಡಿದರು.

ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು, ನಾನು ಕಾಂಗ್ರೆಸ್ ಪರ ಕೆಲಸ ಮಾಡಿರುವ ವ್ಯಕ್ತಿ ಕೆಲ ಕಾರಣಾಂತರಗಳಿಂದ ಬೇರೆ ಪಕ್ಷಕ್ಕೆ ಹೋಗಿದ್ದೆ ಆದರೆ ಹೆಚ್ಚಿನ ಕೆಲಸ ಕಾಂಗ್ರೆಸ್ ಪಕ್ಷದಲ್ಲೇ ಮಾಡಿದ್ದೇನೆ ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಹಕಾರ ಇರಬೇಕು ವ್ಯಕ್ತಿಗಿಂತ ಪಕ್ಷ ದೊಡ್ಡದು ಯಾರೂ ಕೂಡ ಪಕ್ಷಕ್ಕೆ ದಕ್ಕೆ ಆಗದೆ ಹಾಗೆ ನಡೆದುಕೊಳ್ಳಬೇಕು ಕಾಂಗ್ರೆಸ್ ಪಕ್ಷದಿಂದ ಮಾತ್ರ ಶೋಷಿತರಿಗೆ ಬಡ ಜನರಿಗೆ ಅನುಕೂಲವಾಗುತ್ತದೆ ಎಂದರು.

ಮಂಗಳವಾರ ರಾಂಪುರದಲ್ಲಿ ಮೊದಲನೇ ಸಮಾವೇಶ ಮಾಡಲಿದ್ದೇವೆ ಅದಕ್ಕೆ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಬರಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು, ಅದೇ ರೀತಿ ಮುಂದಿನ ದಿನಗಳಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಕರೆಸಿ ಒಂದು ದೊಡ್ಡ ಸಮಾವೇಶ ಮಾಡಲಿದ್ದೇವೆ ಎಂದರು. ಅದೇ ರೀತಿ ಮುಂದಿನ ದಿನಗಳಲ್ಲಿ ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಮ್ಮೆಲ್ಲಾ ಆಶೀರ್ವಾದ ಇರಲಿ ನಾನು ಯಾವುದೇ ಹುದ್ದೆಗೆ ಅಂಟಿಕೊಂಡು ಕೂತವನಲ್ಲ. ನಿಮ್ಮೆಲ್ಲ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ನನ್ನ ಕೈಲಾದ ಮಟ್ಟಿಗೆ ಕೆಲಸ ಮಾಡುತ್ತಿದ್ದೇನೆ ಸಚಿವ ಸ್ಥಾನ ಕೊಡುವುದು ಬಿಡುವುದು ಐಕ್ಯಮೆಂಡಿಗೆ ಬಿಟ್ಟಿದ್ದು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮುಲ್ಲಾ, ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟೇಲ್ ಜಿ ಪಾಪ ನಾಯಕ್, ಮುಖಂಡರುಗಳಾದ ಭಕ್ತ ಪ್ರಹ್ಲಾದ, ಬಿಟಿ ನಾಗಭೂಷಣ್ ಗುತ್ತಿಗೆದಾರರಾದ ಗೋವಿಂದಪ್ಪ ಎಷ್ಟೇ ತಿಪ್ಪೇಸ್ವಾಮಿ ಮಲ್ಲಿಕಾರ್ಜುನ್ ನಾಗಸಮುದ್ರ ನಜೀರ್ ಸಾಬ್, ವಕೀಲರಾದ ಅಶೋಕ್ ಕುಮಾರ್, ಮುಖಂಡರುಗಳಾದ ಜಿ ಪ್ರಕಾಶ್, ಅಬ್ದುಲ್ ಸುಹಾನ್ ಸಾಬ್, ಗುರುರಾಜ್ ನಾಯಕ್ ಮಂಜುನಾಥ್ ರಾಯಪುರ ಸುರೇಶ್, ತನ್ನಯ ಹೆರ್ಜನಳ್ಳಿ ನಾಗರಾಜ್, ಪಿ ಗೋಪಾಲ್ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧಾ ದೇವಯ್ಯ, ಇನ್ನು ಹಲವು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು.

ವರದಿ : ಪಿಎಂ ಗಂಗಾಧರ 

WhatsApp Group Join Now
Telegram Group Join Now
Share This Article
error: Content is protected !!