Ad imageAd image

ಕೆ. ಜುನಿಪೇಠ ಗ್ರಾ. ಪಂ.ಯಲ್ಲಿ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರ

Bharath Vaibhav
ಕೆ. ಜುನಿಪೇಠ ಗ್ರಾ. ಪಂ.ಯಲ್ಲಿ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರ
WhatsApp Group Join Now
Telegram Group Join Now

ಕೆ. ಜುನಿಪೇಠ ಗ್ರಾ. ಪಂ.ಯಲ್ಲಿ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರ ಹಾಗೂ ಪಂಚಾಯಿತಿ ಆಸ್ತಿ ರಜಿಸ್ಟರಗಳನ್ನು ತಿದ್ದುಪಡಿ ಮಾಡಿದವರ ವಿರುದ್ಧ ಬ್ರಹತ್ ಪ್ರತಿಭಟನೆ

ರಾಮದುರ್ಗ:ತಾಲೂಕಿನ ಕೆ ಜುನಿಪೇಠ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರ ಹಾಗೂ ಪಂಚಾಯಿತಿ ಆಸ್ತಿ ರಜಿಸ್ಟರ್ ಗಳನ್ನು ತಿದ್ದುಪಡಿ ಮಾಡಿದವರ ವಿರುದ್ದ ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ವಾಗಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ತಾಲೂಕಾ ಸಮಿತಿ ರಾಮದುರ್ಗ ವತಿಯಿಂದ ಗ್ರಾಮ ಪಂಚಾಯಿತಿ ಮುಂದೆ ಬ್ರಹತ್ ಪ್ರತಿಭಟನೆ ನಡೆಸಿದರು. ಕೆಲ ಹೊತ್ತು ನಂತರ ಸ್ಥಳಕ್ಕೆ ಆಗಮಿಸಿದ ತಾ. ಪಂ. ಇ ಓ ಅವರಿಗೆ ಇಲ್ಲಿ ನಡೆದಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರ ಬಗ್ಗೆ ಮಾತನಾಡಿ ದಲಿತ ಕೇರಿಯಲ್ಲಿ ಚರಂಡಿ, ಸಿ ಸಿ ರಸ್ತೆ ಬೀದಿದೀಪಗಳು, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಫಕೀರಪ್ಪ ಛಲವಾದಿ ಅವರು ಹಲವಾರು ಭಾರಿ ಮನವಿಯನ್ನು ನೀಡಿದ್ದರೂ ಅಧಿಕಾರಿಗಳು ಇದಕ್ಕೆ ಸ್ಪಂದಿಸದೆ ನಿರ್ಲಕ್ಷ ತೋರಿ ದಲಿತರನ್ನು ಕಡೆಗಣಿಸುತ್ತಾ ಬಂದಿದ್ದಾರೆ. ದಲಿತ ಸಮುದಾಯಕ್ಕೆ ಅನ್ಯಾಯವೇಸಗಿದ್ದಾರೆ. ಅಲ್ಲದೇ 15 ನೇ ಹಣಕಾಸು ಯೋಜನೆಯಲ್ಲಿ ದಲಿತ ಸಮುದಾಯಕ್ಕೆ 25%ಪ್ರತೀಶತ ಹಣವನ್ನು ಖರ್ಚು ಮಾಡದೆ ಇರುವುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಲಿತರಿಗೆ ಕೆಲಸ ನೀಡದೆ ಅನ್ಯಾಯವೆಸಗಿದ್ದಾರೆ, ಅಲ್ಲದೇ ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಜಾಬ್ ಕಾರ್ಡ್ ನೀಡಿ ಅವರ ಹೆಸರಿನಲ್ಲಿ ಎನ್ ಎಂ ಆರ್ ನ್ನು ಹಾಕುತ್ತಾರೆ. ಗ್ರಾಮ ಪಂಚಾಯಿತಿ ಪಿ ಡಿ ಓ, ಕೆಲವು ಕಾಣದ ಕೈಗಳು ಜೊತೆಗೂಡಿ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಅಲ್ಲದೇ ಇಲ್ಲಿನ ಬಿಲ್ ಕಲೆಕ್ಟೆರ್ ಹಣ ಪಡೆದು ಪಂಚಾಯಿತಿ ಆಸ್ತಿ ರಜಿಸ್ಟರ್ ಗಳನ್ನು ಒಬ್ಬರ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಮಾಡಿದ್ದಾರೆ ಎಂದು ಆಕ್ರೋಶ ವನ್ನು ಹೊರ ಹಾಕಿ ಇಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರ ಬಗ್ಗೆ 15 ದಿನಗಳೋಳಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಒಂದು ವೇಳೆ ಇದರ ಬಗ್ಗೆ ನಿರ್ಲಕ್ಷ ತೋರಿದಲ್ಲಿ ಪಂಚಾಯಿತಿಗೆ ಬೀಗ ಜಡಿದು ನಿರಂತರ ಧರಣಿ ಕೈಗೊಳ್ಳುಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಸಂಜೀವ ಕಾಂಬಳೆ, ಚಿದಾನಂದ ತಳಕೇರಿ. ದುರಗಪ್ಪ ಮೇಲಿನಮನಿ, ಮಂಜುಳಾ ಕಾಂಬಳೆ, ಸದಾಶಿವ ಸಿಂಗೆ, ದುರ್ಗಮ್ಮ ಕಾಂಬಳೆ ರಾಜಕುಮಾರ ಛಲವಾದಿ, ವಿಜಯ ಧರ್ಮಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಕುಮಾರ ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!