ಬೆಂಗಳೂರು : ಯಶವಂತಪುರ ವಿಧಾನ ಸಭಾ ಕ್ಷೇತ್ರದ ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ವತಿಯಿಂದ ಗಣೇಶ ಉತ್ಸವ, ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣೆ, ಅನ್ನ ಸಂತರ್ಪಣೆ ಮತ್ತು ಮನೋರಂಜನೆ ಅಂದರೆ (ಆರ್ಕೆಸಟ್) ಆಯೋಜಿಸಲಾಗಿತ್ತು.\

ಸುಂದರವಾದ ಗಣೇಶ ವಿಗ್ರಹವನ್ನು ಸ್ಥಾಪಿಸಿ ವಿವಿಧ ಹೂವುಗಳಿಂದ ಅಲಂಕಾರಿ ಶಾಸ್ತ್ರೋಕ್ತವಾಗಿ ಪೂಜಾ ಪುನಸ್ಕಾರ ಮಹಾಮಂಗಳಾರತಿ ಜರುಗಿದವು ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಟ್ರಾವೆಲ್ಸ್ ಹೇಳಿದರು.

ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ಮುಖಂಡರಾದ ಕೀರ್ತಿ, ಭಾರತ್, ದರ್ಶನ್, ಪ್ರೀತಮ್, ಮಲ್ಲಿ, ಅಜಯ್, ಪುನೀತ್, ವೆಂಕಿ, ಭೀಮ, ಅಭಿ, ಬಾಬು, ಇಶಾಂತ್ ಇವರೆಲ್ಲ ನೇತೃತ್ವದಲ್ಲಿ ಆಯೋಜಿಸಿದ್ದ.
ಕಾರ್ಯಕ್ರಮದಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಗ್ರೆಟರ್ ಬೆಂಗಳೂರು ಪ್ರಭಾವಿ ಆಕಾಂಕ್ಷಿ ಅಭ್ಯರ್ಥಿ ಮಂಜುನಾಥ್ ಟ್ರಾವೆಲ್ಸ್ ಭಾಗವಹಿಸಿ ಗಣೇಶನ ದರ್ಶನ ಪಡೆದು ಮಾತನಾಡಿ ಅವರು ತಿಗಳರಪಾಳ್ಯದ ಗಜಮುಖ ಗೆಳೆಯರ ಬಳಗದ ಯುವಕರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾದೆ ಮಾತಿನಂತೆ ಹುಡುಗರು ಚಿಕ್ಕವರಾಗಿದ್ದರು ಅವರೆಲ್ಲರು ದೊಡ್ಡ ಪ್ರಮಾಣದಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಗಣೇಶ ಉತ್ಸವ ಮಾಡಿ ಬುದ್ದಿವಂತರಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಮತ್ತು ಸಮಾಜ ಸೇವಕರಿಗೆ ಆವ್ಹಾನಿಸಿ ಪ್ರತಿಯೋಬ್ಬರಿಗೂ ಗೌರವಿಸಿದ್ದು ಬಹಳ ಖುಷಿಯಾಯಿತು ಎಂದು ಮಂಜುನಾಥ್ ಟ್ರಾವೆಲ್ಸ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ದೊಡ್ಡಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು, ಮಾಜಿ ಅಧ್ಯಕ್ಷ ವಿ. ನಾಗರಾಜ್ ಅಂದ್ರಹಳ್ಳಿ, ಮುಖಂಡ ಕೇಶವ ಮೂರ್ತಿ ಮಾತನಾಡಿದರು.
ಕುಮಾರ್ ಎಸ್ ಜಿ ತಿಗಳರಪಾಳ್ಯ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಲ್ಲೇಶ್ ಅಂದ್ರಹಳ್ಳಿ, ಕೀರ್ತಿ ಗೌಡ ಸೇರಿದಂತೆ ಸಮಸ್ತ ನಾಗರಿಕ ಬಂಧು ಭಗನಿಯರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




