ಬೆಂಗಳೂರು: -ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ: ಕೋವಿಡ್ ನಂತರ ಜನರಲ್ಲಿ ಹೃದಯಾಘಾತದಂತ ಸಮಸ್ಯೆಗಳು ಹೆಚ್ಚಾಗಿದ್ದು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದ್ದು, ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದು’, ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಗ್ಗೆರೆಯ ಚೌಡೇಶ್ವರಿನಗರದ ಅಪೋಲೋ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಅರ್ಪಿತ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಹಾಗೂ ಮಾಜಿ ಪಾಲಿಕೆ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ, ಸಿದ್ದೇಗೌಡ, ವೇಲು ನಾಯಕ್, ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ಅರ್ಪಿತಾ ಸೇವಾ ಟ್ರಸ್ಟ್ ಹಾಗೂ ಸಪ್ತಗಿರಿ ಆಸ್ಪತ್ರೆ ಕೆಂಪೇಗೌಡ ಆಸ್ಪತ್ರೆ, ಚಂದ್ರಶೇಖರ್ ಹಾಸ್ಪಿಟಲ್, ಕ್ಯಾನ್ಸರ್ ಹಾಸ್ಪಿಟಲ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತಾಡಿದರು.
ಈ ವೇಳೆ ಮಾತನಾಡಿದ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ‘ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು’, ಎಂದು ತಿಳಿಸಿದರು.
ಸುಸಜ್ಜಿತ ಸ್ಕ್ಯಾನಿಂಗ್ ಹಾಗೂ ಲ್ಯಾಬ್ ಉಪಕರಣಗಳೊಂದಿಗೆ ಆಗಮಿಸಿದ್ದ ನುರಿತ ವೈದ್ಯರ ತಂಡವು ಮಹಿಳೆಯರ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಿದರು. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವವರಿಗೆ ಅದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಗಳೂರು ಪಶ್ಚಿಮ ಜಿಲ್ಲಾ ಅಧ್ಯಕ್ಷ ಹನುಮಂತರಾಯಪ್ಪ , ಕರ್ನಾಟಕ ರಾಜ್ಯ ಚಾಲಕರ ಪರಿಷತ್ತಿನ ರಾಜ್ಯಾಧ್ಯಕ್ಷ ಸೋಮಶೇಖರ್ ಗೌಡ, ನಿರಂಜನ್, ಗಿರೀಶ್ ಗೌಡ, ಕುಶಾಲ್ ಗೌಡ, ಖ್ಯಾತ ಜಾನಪದ ಕಲಾವಿದ ಕುಣಿಗಲ್ ರಾಮಚಂದ್ರ, ಸಂತೋಷ್, ಲೋಕೇಶ್, ರಮೇಶ್, ಹನುಮಂತರಾಜು, ಮೋಹನ್, ಮಲ್ಲೇಶ್, ಮನೋಜ್, ಮಂಜುನಾಥ್ ಲಗ್ಗೆರೆ, ಶ್ರೀಕಾಂತ್, ಹನುಮಂತೇಗೌಡ, ಅಭಿ, ಆಶಾ ಕಾರ್ಯಕರ್ತೆ ಶಶಿ ಸೇರಿದಂತೆ ಲಗ್ಗೆರೆಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು .
ವರದಿ:- ಅಯ್ಯಣ್ಣ ಮಾಸ್ಟರ್