Ad imageAd image

ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

Bharath Vaibhav
ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

 ಚಿಕ್ಕೋಡಿ:- ನಗರದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ ವಿದ್ಯಾರ್ಥಿನಿ ಕು.ಅಂಜಲಿ ಮೋಹನ ಅಂಬಿಗೇರ ಯುವತಿಯ ಹತ್ಯೆ, ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆಯವರು ಖಂಡಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಮಾತನಾಡಿದರು.

ಅಂಜಲಿ ಅಂಬಿಗೇರ ಯುವತಿಯ ಹತ್ಯೆ ಅತ್ಯಂತ ಖಂಡನೀಯವಾಗಿದೆ.ರಾಜ್ಯದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಕೊಲೆಯಾದರು ರಾಜ್ಯ ಸರ್ಕಾರ ಮೌನ ವಹಿಸಿರುವುದು ಖಂಡಿಸುತ್ತೇನೆ. ನೇಹಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿರುವುದು ವಿಷಾದನೀಯ. ಹೇಯ್ಯ ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ಆಗಬೇಕು.ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ,ಉಪಾಧ್ಯಕ್ಷರಾದ ಶ್ರೀ ನಿಂಗಪ್ಪ ಖೋಕಲೆ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ನವನಾಳೆ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸೌ.ಶಾಂಭವಿ ಅಶ್ವತಪುರ,ಮಂಡಲ ಅಧ್ಯಕ್ಷರಾದ ಶ್ರೀ ಪವನ ಮಹಾಜನ,ಶ್ರೀ ವಿಶ್ವನಾಥ ಕಮತೆ, ಶ್ರೀ ಸಂಜಯ ಪಾಟೀಲ,ಶ್ರೀ ಅಪ್ಪಾಸಾಹೇಬ ಚೌಗಲೆ,ಮಹಿಳಾ ಮೋರ್ಚಾ ಎಲ್ಲ ಮಂಡಲ ಅಧ್ಯಕ್ಷರು,ಸದಸ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!