Ad imageAd image

ಅಥಣಿ ವಾಲ್ಮೀಕಿ ವೃತದಲ್ಲಿ ಬೃಹತ್ ಪ್ರತಿಭಟನೆ

Bharath Vaibhav
ಅಥಣಿ ವಾಲ್ಮೀಕಿ ವೃತದಲ್ಲಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

—–ವಾಲ್ಮೀಕಿ ಸಮಾಜದ ಬಗ್ಗೆ  ಮಾಜಿ ಸಂಸದ ರಮೇಶ್ ಕತ್ತಿ ಅವರ ನಿಂದನಾತ್ಮಕ ಹೇಳಿಕೆ ವಿಚಾರ

ಚಿಕ್ಕೋಡಿ: ಲೋಕಸಭಾ ಮಾಜಿ ಸಂಸದ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.ಈ ಹೇಳಿಕೆಗೆ ವಿರುದ್ಧವಾಗಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ರಮೇಶ್ ಸಿಂದಗಿ ಅವರ ನೇತೃತ್ವದಲ್ಲಿ ಅಥಣಿ ವಾಲ್ಮೀಕಿ ವೃತ್ತ ದಲ್ಲಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಗಿದೆ.


ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಿತೇಶ್ ಪಟ್ಟಣ ವಕೀಲರು ಅಥಣಿ ರಮೇಶ್ ಕತ್ತಿ ಅವರು ಒಂದು ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇರಬೇಕು ಅದನ್ನು ಬಿಟ್ಟು ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಆದರಿಂದ ವಾಲ್ಮೀಕಿ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದರು?
ಇದೆ ವೇಳೆಯಲ್ಲಿ ಸುನಿತಾ ಐಹೊಳೆ ಅವರು ಮಾತನಾಡಿ ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಲು ರಮೇಶ್ ಕತ್ತಿ ಯಾವ ಅರ್ಹತೆ ಇದೆ ಎಂದು ಕೇಳಿದರು?
ಪ್ರತಿಭಟನೆಯಲ್ಲಿ ನೂರಾರು ವಾಲ್ಮೀಕಿ ಸಮುದಾಯದ ಸದಸ್ಯರು, ಯುವಕರು ಭಾಗವಹಿಸಿ,
“ಜಾತಿ ನಿಂದನೆ ಮಾಡಿದ ರಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಘೋಷಣೆ ಕೂಗಿದರು.
ಈ ಪ್ರತಿಭಟನೆಯಲ್ಲಿ ಗಜಾನನ ಮಂಗಸೂಳಿ ರಮೇಶ್ ಸಿಂದಗಿ ರಾವಸಾಬ್ ಐಹೊಳೆ ಸುನಿತಾ ಐಹೊಳೆ ನಿತೇಶ್ ಪಟ್ಟಣ್ ವಕೀಲರು ಇನ್ನು ಮುಂತಾದವರು ಉಪಸ್ಥಿತರಿದ್ದರು? ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಸಂಚಾರ ಕೆಲವು ಸಮಯ ಅಸ್ತವ್ಯಸ್ತಗೊಂಡಿತು. ಪ್ರತಿಭಟನಾಕಾರರು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದಾರೆ.

ವರದಿ: ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!