ಸಿಂಧನೂರು –ತಾಲೂಕ ಕಾಂಗ್ರೆಸ್ ಸಮಿತಿ ಸಿಂಧನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾನ್ಯ ರಾಜ್ಯಪಾಲರು ಶ್ರೀ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಪ್ರೇರಿತ ಪ್ರಾಶುಕ್ಯೂಷನ್ ಗೆ ಅನುಮತಿ ನೀಡಿದ ಅಸಂವಿಧಾನಿಕ ನಡೆ ಖಂಡಿಸಿ ಬೃಹತ್ ಪ್ರತಿಭಟನೆ..
ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಯವರ ವತಿಯಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಮಾನ್ಯ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ರಾಜ್ಯಪಾಲರ ಪ್ರತಿಕೃತಿಯನ್ನು ದಹನ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಹ ಮಂತ್ರಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ. ದಿವಂಗತ ದೇವರಾಜ ಅರಸುರಂತೆ ನಮ್ಮ ಸಿದ್ದರಾಮಯ್ಯನವರು ರಾಜ್ಯದಲ್ಲಿ ಒಳ್ಳೆ ಆಡಳಿತವನ್ನು ನೀಡುತ್ತಿದ್ದಾರೆ ಅನ್ನಭಾಗ್ಯ. ಶಕ್ತಿಯೋಜನೆ. ಯುವ ನಿಧಿ. ಅನೇಕ ಯೋಜನೆಗಳನ್ನು ನೀಡಿದ್ದು ವಿರೋಧ ಪಕ್ಷಗಳು ಇದನ್ನು ಸಹಿಸಲಾರದೆ ಮೂಢ ಹಗರಣದಲ್ಲಿ ಸಿಲುಕಿಸಿ ಅಧಿಕಾರದಿಂದ ಕೆಳಗಿಳಿಸಿ ಕುತಂತ್ರದಿಂದ ವಾಮ ಮಾರ್ಗದಿಂದ ಹಂಬಲದಿಂದ ಬಿಜೆಪಿ. ಜೆಡಿಎಸ್ಸಿನವರು ಆಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಮಾನ್ಯ ತಸಿಲ್ದಾರ್ ಸಿಂಧನೂರ ಇವರ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು
ವರದಿ:-ಬಸವರಾಜ ಬುಕ್ಕನಹಟ್ಟಿ