ರಾಯಚೂರು :-ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಮುಖಾಂತರ.ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ.ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ. ಎನ್. ಮೂರ್ತಿ ಸ್ಥಾಪಿತ) ಜಿಲ್ಲಾ ಸಮಿತಿ ರಾಯಚೂರು ಬೃಹತ್ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಒತ್ತಾಯ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಮಾದಿಗ ಮತ್ತು ಚಲುವಾದಿ ಸಮಾಜಗಳು ಅವುಗಳ ಸಂಬಂಧಿತ ಉಪಜಾತಿಗಳು ಅಸ್ಪೃಶ್ಯತೆಯನ್ನು ಈಗಲೂ ಅನುಭವಿಸುತ್ತಿವೆ .
ಅಸ್ಪೃಶ್ಯತೆಯ ನೋವು ಒಂದು ಕಡೆಯಾದರೆ ಮೀಸಲಾತಿ ಲಾಭ ಸರಿಯಾಗಿ ತಕ್ಕದೇ ಇರುವುದು ದೊಡ್ಡ ಆಘಾತವನ್ನು ಮಾದಿಗ- ಚೆಲುವಾದಿ ಸಮುದಾಯಗಳು ಅನುಭವಿಸುತ್ತಿವೆ ಪರಿಶಿಷ್ಟ ಜಾತಿ ಪಟ್ಟಿಯ ಮಧ್ಯದಲ್ಲಿ ಸೇರ್ಪಡೆಯಾಗಿರುವ ಸ್ಪರ್ಶ ಸಮುದಾಯಗಳು ಮೀಸಲಾತಿ ಬಹು ಪಾಲನ್ನು ಕಬಳಿಸುತ್ತೇವೆ ಇದರಿಂದಾಗಿ ಮೀಸಲಾತಿಯ ಲಾಭವನ್ನು ಬಲಾಡ್ಯ ಜಾತಿಗಳು ಪಡೆಯುತ್ತಿದ್ದು ನಿಜವಾದ ವಂಚಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಪರಿಶಿಷ್ಟ ಜಾತಿ ಸಂಖ್ಯೆಯಲ್ಲಿ ಬಹು ಸಂಖ್ಯಾತವಾಗಿರುವ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳು ನಿಷ್ಕೃಷ್ಟ ಜೀವನವನ್ನು ನಡೆಸುತ್ತಿದ್ದು ಸಾಮಾಜಿಕವಾಗಿ.
ಆರ್ಥಿಕವಾಗಿ. ಶೈಕ್ಷಣಿಕವಾಗಿ. ತುಳಿತಕ್ಕೆ ಒಳಗಾಗಿದ್ದಾರೆ ಒಳ ಮೀಸಲಾತಿ ನೀಡುವುದು ಅತಿ ತುರ್ತು ಕೆಲಸವಾಗಿದೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಮೂರು ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ ಚಳುವಳಿ ಮಾಡಿದ ಹಲವಾರು ಜನ -ಜೀವನ ಬದುಕನ್ನು ಬಲಿಕೊಟ್ಟಿದ್ದಾರೆ ದಶಕಗಳಿಂದ ನಡೆಸಿದ ಹೋರಾಟಕ್ಕೆ ಮಣಿದ ಕರ್ನಾಟಕ ಸರ್ಕಾರ 2024 ರಲ್ಲಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿತು.
ದಿನಾಂಕ 14/ 06/2012 ರಂದು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು ನಂತರ 2023ರಲ್ಲಿ ಮಾನ್ಯ ಬಸವರಾಜ ಬೊಮ್ಮಾಯಿ ಅವರು ನೇತೃತ್ವದಲ್ಲಿ ಬಿಜೆಪಿ ಪಕ್ಷದ ಸರ್ಕಾರದ ಸಚಿವ ಸಂಪುಟವು ನಿವೃತ್ತ ನ್ಯಾಯಮೂರ್ತಿ ಸದಾಶಿವ ರವರ ವರದಿಯಲ್ಲಿನ ದತ್ತಾಂಶದ ಪ್ಯಾರಾ-1ನ್ನು ಅಂಗೀಕರಿಸಿ ದಿ. 31 / 3/ 2023 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಈಗಿನ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟರ ಮೀಸಲಾತಿ ವರ್ಗಿಕರಣ ಮಾಡಿದ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ದಿ. 17/3 //2024 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಇರುತ್ತದೆ.
ಸುಪ್ರೀಂಕೋರ್ಟಿನ ಏಳು ನ್ಯಾಯಾಧೀಶರ ಸಂವಿಧಾನ ಪೀಠವು ದಿ. 1/8/2024 ರಂದು ಐತಿಹಾಸಿಕ ತೀರ್ಪನ್ನು ನೀಡಿದೆ ಆ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ನಿರ್ದೇಶನವಿರುತ್ತದೆ ರಾಜ್ಯ ಸರ್ಕಾರವು ವಿಳಂಬ ಧೋರಣೆ ಅನುಸರಿಸಿದ ಸುಪ್ರೀಂಕೋರ್ಟಿನ ತೀರ್ಪನ್ನು ಒಪ್ಪಿ ಸಂವಿಧಾನಕ್ಕೆ ಗೌರವ ನೀಡಿ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಬೃಹತ್ ಪ್ರತಿಭಟನೆ ಮೂಲಕ ಸರಕಾರಕ್ಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಘಟನಾ ಮುಖಂಡರಾದ ಬಸವರಾಜ ಸಾಸಲ ಮರಿ ವಿಭಾಗಿಯ ಅಧ್ಯಕ್ಷರು.. ಅಶೋಕ ನಂಜಲದಿನ್ನಿ ಜಿಲ್ಲಾ ಅಧ್ಯಕ್ಷರು.. ಶಾಂತಾಬಾಯಿ ಮಹಿಳಾ ಘಟಕ ಜಿಲ್ಲಾಧ್ಯಕ್ಷರು.. ರಂಗಪ್ಪ ಕೋತಿಗುಡ್ಡ ಜಿಲ್ಲಾ ಉಪಾಧ್ಯಕ್ಷರು.. ಜಯರಾಜ್ ಟೈಗರ್ ಜಿಲ್ಲಾ ಕಾರ್ಯಧ್ಯಕ್ಷರು.. ಎಂ.ಮನೋಹರ್ ಸಿರವಾರ.. ರಾಜು ಬೊಮ್ಮನಾಳ್. ಬಸವರಾಜ ಕಲ್ಮಲ್.. ಹುಲುಗಪ್ಪ ಸೈದಾಪುರ.. ಜಮದಗ್ನಿ ಬೋನಾಳ.. ಬಸವರಾಜ ಕುಣಿಕೆಲ್ಲೂರು.. ನಿರುಪಾದಿ ಎಲೆಕೂಡ್ಲಿಗಿ.. ಇನ್ನು ಅನೇಕರಿದ್ದಾರೆ.
ವರದಿ :-ಬಸವರಾಜ ಬುಕ್ಕನಹಟ್ಟಿ