ಬೇಡಕಿಹಾಳ :- ರೈತರ ಕೃಷಿ ಭೂಮಿಯ ಪಹಣಿ ಪತ್ರದಲ್ಲಿವಕ್ಫ್ ಆಸ್ತಿ ಎಂದು ದಾಖಲಿಸಿದ ಕಾಂಗ್ರೆಸ್ ಸರ್ಕಾರ ಹಾಗೂ ರೈತ ವಿರೋಧಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನೂರಾರು ರೈತರಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಉಪತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸೋಮವಾರ ಬೆಳಿಗ್ಗೆ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ನಾಡಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಕಾಯ್ದೆಯನ್ನು ಸಂಪೂರ್ಣ ರದ್ದು ಪಡಿಸಬೇಕು.ವಕ್ಫ್ ಅದಾಲತ್ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬೇಕು. ಎಂದು ಆಗ್ರಹಿಸಿದರು. ಪ್ರತಿಭಟನೆ ಮೆರವಣಿಗೆ ಶಿವಾಜಿ ವೃತ್ತದಲ್ಲಿ ಅಗಮಿಸುತ್ತಿದ್ದಂತೆ ಮಾನವ ಸರಪಳಿ ನಿರ್ಮಿಸಿ 20 ನಿಮಿಷದವರೆಗೆ ಸಂಚಾರ ಸ್ಥಗಿತಗೊಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಪಾಟೀಲ, ರಾಜು ಗೌರಾಜೆ, ರಾಮಚಂದ್ರ ರಾಮನಕಟ್ಟಿ ಲಕ್ಷ್ಮಿಕಾಂತ್ ಹಾಲಪ್ಪನವರ, ಅತಿಕ್ರಾಂತ ಪಾಟೀಲ ಮಾತನಾಡಿದರು.
ತದನಂತರ ಪ್ರತಿಭಟನಾಕಾರರು ಶಿವಾಜಿ ವೃತ್ತದಿಂದ ನಾಡಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಪಿ.ಬಿ.ಶೀಲವಂತರಿಗೆ ರೈತರ ದೈನಂದಿನ ಕೃಷಿ ಸಲಕರಣೆಗಳಾದ ನೇಗಿಲು, ಕೂರಿಗೆ,ಹಾಲಿನ ಪಾತ್ರೆ, ಕಂದೀಲು ನೀಡುವುದರೊಂದಿಗೆ ಮನವಿ ಪತ್ರ ಅರ್ಪಿಸಿ ಸಂತಾಪ ವ್ಯಕ್ತಪಡಿಸಿದರು. ಪ್ರತಿಭಟನೆ ಮೆರವಣಿಗೆಯಲ್ಲಿ ಸುರಕ್ಷಿತೆ ಕಾಪಾಡಲು ಸದಲಗಾ ಪಿಎಸ್ಐ ಶಿವಕುಮಾರ್ ಬಿರಾದಾರ್ ತಮ್ಮ ಸಿಬ್ಬಂದಿಯೊಂದಿಗೆ ಬಂದೋಬಸ್ತ್ ಕೈಗೊಂಡಿದ್ದರು.ಪ್ರತಿಭಟನೆಯಲ್ಲಿ ಅಭಿನಂದನ ಪಾಟೀಲ, ಹೇಮಂತ ಸಿಂಗೆ, ದರೆಪ್ಪ ಹವಾಲ್ದಾರ, ರಮೇಶ್ ಮಾನೆ ಸಂಜಯ್ ಕೋರೆ ಸಿರಿಶ್ ಅಡಕೆ, ಬಸವರಾಜ್ ಹಣಬರ, ರಾಜೀವ ಅಮೃತಸಮ್ಮಣ್ಣವರ, ಪ್ರಶಾಂತ ಕರಂಗಳೆ ಸೇರಿದಂತೆ 500ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು. ಮಹಾವೀರ ಚಿಂಚಣೆ.
ವರದಿ:-ಮಹಾದೇವ