ರಾಯಚೂರು:ಜಾತಿಜನಗಣತಿ ವಿರೋಧಿಸಿ ನಗರದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಸುಮಾರು ಎಂಟು ಸಾವಿರದಿಂದ 9 ಸಾವಿರ ಜನರೊಂದಿಗೆ ಸೇರಿಕೊಂಡು ಬೃಹತ್ ಪ್ರತಿಭಟನೆ ಕಾರ್ಯಕ್ರಮ ಮೆರವಣಿಗೆ.. ಮುಖಾಂತರ ನಡೆಸಲಾಯಿತು.
ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಮತ್ತು ವಿವಿಧ ಮಠಾಧೀಶರಿಂದ ಕಾರ್ಯಕ್ರಮ.ನಗರದ ಹೊರವಲಯದ ಕಲ್ಯಾಣ ಮಟ್ಟಪದಲ್ಲಿ ಸಭೆ, ಅಲ್ಲಿಂದ ನೂತನ ಜಿಲ್ಲಾಧಿಕಾರಿ ಕಛೇರಿವರಿಗು ಪ್ರತಿಭಟನ ಮೆರವಣಿಗೆ.ಶಾಸಕ ಡಾ. ಶಿವರಾಜಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ ಜಿಲ್ಲೆಯ ಹಲವು ಮಠಾಧೀಶರು ಭಾಗಿಯಾಗಿದ್ದರು.
ಜಾತಿಜನಗಣತಿ ರದ್ದು ಪಡಿಸಿ, ಪುನಃ ಜಾತಿ ಗಣಿತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಮೂಲಕ ಒತ್ತಾಯ ಮಾಡಿದರು ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಮತ್ತು ಎಲ್ಲ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರುಗಳು ಲಿಂಗಾಯತ್ ಸಮುದಾಯದವರು ಎಲ್ಲಾ ಗಣ್ಯರುಗಳು ಎಲ್ಲ ಮಠದ ಸ್ವಾಮಿಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ