Ad imageAd image

ಧರ್ಮಸ್ಥಳದ ವಿರುದ್ಧ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

Bharath Vaibhav
ಧರ್ಮಸ್ಥಳದ ವಿರುದ್ಧ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಮೊಳಕಾಲ್ಮೂರು :ಧರ್ಮಸ್ಥಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಗೋರ ಶಿಕ್ಷೆ ಆಗಬೇಕು ಯಾವುದೇ ಕಾರಣಕ್ಕೂ ಸರ್ಕಾರ ಇವರನ್ನು ರಕ್ಷಿಸಬಾರದು ಎಂದು ಮಾಜಿ ಶಾಸಕರಾದ ಎಸ್ ತಿಪ್ಪೇಸ್ವಾಮಿ ಆಕ್ರೋಶವರ ಹಾಕಿದರು.

ಪಟ್ಟಣದಲ್ಲಿ ಸೋಮವಾರ ಬಿಜೆಪಿ ಮಂಡಲದ ವತಿಯಿಂದ ಧರ್ಮಸ್ಥಳ ಹುಳುವಿಗಾಗಿ ಧರ್ಮಯುದ್ಧ ಎಂಬ ಸಂಕಲ್ಪದೊಂದಿಗೆ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಧರ್ಮಸ್ಥಳದ ಮೇಲೆ ಕಳಂಕ ತರುತ್ತಿರುವ ಎಸ್ಐಟಿ ರಚಿಸಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಇವರ ವಿರುದ್ಧ ಜನರು ದಂಗೆ ಹೇಳುತ್ತಿದ್ದಾರೆ.

ಈ ಕೂಡಲೇ ಧರ್ಮಸ್ಥಳದ ಹೆಸರನ್ನು ಹೇಳಿ ಯಾರು ಪಿತ್ತೂರಿ ನಡೆಸಿದ್ದಾರೋ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹಿಂದುಗಳು ದಂಗೆ ಹೇಳುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ಡಾ ಪಿ ಎಂ ಮಂಜುನಾಥ್ ಮಾತನಾಡಿ. ಧರ್ಮಸ್ಥಳವು ಶ್ರದ್ಧಾಭಕ್ತಿ ಕೇಂದ್ರವಾಗಿ ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ, ಕಾಂಗ್ರೆಸ್ ಸರ್ಕಾರವು ಹಿಂದುಗಳ ವಿರೋಧಿಯಾಗಿ ಕಳೆದ ಹಲವು ವರ್ಷಗಳಿಂದ ದಾಳಿ ನಡೆಸುತ್ತಾ ಬಂದಿದ್ದಾರೆ, ಧರ್ಮಸ್ಥಳದ ವಿರುದ್ಧ ದೊಡ್ಡ ಷಟ್ಯಾಂತರವೇ ನಡೆದಿದೆ. ಎಲ್ಲಾ ಕಾಂಗ್ರೆಸ್ ಸಚಿವರೇ ಹೇಳುವಂತಹ ಮಾತು ಎಡಪಂಥ ಬುದ್ಧಿಜೀವಿಗಳ ಪ್ರಗತಿಪರ ಹೋರಾಟಗಾರರ ಒತ್ತಡ ಏರಿದರೂ ಎಂದು ಹೇಳುತ್ತಿದ್ದಾರೆ, ಕಾಂಗ್ರೆಸ್ ಸರ್ಕಾರವು ಉಚಿತ ಭಾಗ್ಯಗಳಿಗೆ ಹಣ ವಂದಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ತರಾಟೆಗೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀರಾಮ ರೆಡ್ಡಿ, ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಮಲ್ಲೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ರೂಪ ವಿನಯ್ ಕುಮಾರ್ ಸರ್ವ ಮಂಗಳ ಶಾಂತರಾಮ್ ಬಸಪತಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್ ಗೌಡ, ಎಸ್ ಟಿ ಮೋರ್ಚಾ ಅಧ್ಯಕ್ಷರಾದ, ತಿಪ್ಪೇಸ್ವಾಮಿ, ಪ್ರಭಾಕರ್ ಹರೀಶ್ ಕುಮಾರ್ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಶುಭ ಪೃಥ್ವಿರಾಜ್, ಸಿದ್ದಣ್ಣ ರಮೇಶ್ ದಳವಾಯಿ ಹೇಮಂತ್ ಕುಮಾರ್ ಕೆಬಿ ಮಹೇಶ್ ಶಿವಣ್ಣ ದರ್ಶನ್ ಸಂತೋಷ್ ವಸಂತಮ್ಮ ಸಂಘದ ಮಹಿಳೆಯರು ಬಿಜೆಪಿ ಮುಖಂಡರು ಇನ್ನು ಹಲವಾರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!