Ad imageAd image

ಇಂದಿನಿಂದ ಜನವಾಡ ಮಹದೇವಸ್ವಾಮಿ ಧರ್ಮದ ಮಠ ಜಾತ್ರೆ

Bharath Vaibhav
ಇಂದಿನಿಂದ ಜನವಾಡ ಮಹದೇವಸ್ವಾಮಿ ಧರ್ಮದ ಮಠ ಜಾತ್ರೆ
WhatsApp Group Join Now
Telegram Group Join Now

ಚಿಕ್ಕೋಡಿ :ತಾಲೂಕಿನ ಪುಣ್ಯ ಕ್ಷೇತ್ರ ಜನವಾಡ ಗ್ರಾಮದ ಮಹದೇವ್ ಸ್ವಾಮಿ ಧರ್ಮದ ಮಠದ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. ಜಾತ್ರೆಯಲ್ಲಿ ಕೃಷಿ ಮೇಳ ಜಾನುವಾರು ಪ್ರದರ್ಶನ ಸೇರಿದಂತೆ ಅನೇಕ ಧಾರ್ಮಿಕ ಕೈಂಕರಗಳು ಜರುಗಲಿವೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷ ಪಿರಗೊಂಡಾ ಮಗದುಮ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಜಾತ್ರೆಯ ಕುರಿತು ಅಧಿಕ ಮಾಹಿತಿ ನೀಡಿದ ಅವರು ಸೋಮವಾರ 23ರಂದು ಬೆಳಿಗ್ಗೆ ಮಹದೇವ್ ಸ್ವಾಮಿಯ ಪೂಜೆ ಭಕ್ತರಿಂದ ದಂಡ ನಮಸ್ಕಾರ ಗ್ರಾಮಸ್ಥರಿಂದ ಮಹಾ ನೈವೇದ್ಯ ನಡೆಯಲಿದೆ.

24ರಂದು ಆದಿಶಕ್ತಿಯ ಪೂಜೆ ಹಾಗೂ ಉಡಿ ತುಂಬಾ ಕಾರ್ಯಕ್ರಮ 25ರಂದು ಬೆಳಿಗ್ಗೆ ನಿತ್ಯ ಪೂಜೆ ಮಧ್ಯಾಹ್ನ ಮಹಾಪ್ರಸಾದ ದಿನಾಂಕ್ 26ರಂದು ಆದಿಶಕ್ತಿಗೆ ಪೂಜೆ ನೈವೇದ್ಯ ಮಧ್ಯಾಹ್ನ ಜಾನುವಾರುಗಳ ಪ್ರದರ್ಶನ ನಡೆಯಲಿದ್ದು ಅತ್ಯುತ್ತಮ ಎತ್ತುಗಳ ಜೋಡಿಗೆ ಅನುಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಕ್ರಮಾಂಕಕ್ಕೆ ಪ್ರಶಸ್ತಿ ಹಾಗೂ ಪದಕ ನೀಡಿ ಗೌರವಿಸಲಾಗುವುದು ಶುಕ್ರವಾರ ದಿನಾಂಕ 27ರಂದು ಬೆಳಿಗ್ಗೆ ಆದಿಶಕ್ತಿ ಪೂಜೆ, ಮಧ್ಯಾಹ್ನ ಕೃಷಿ ಪ್ರದರ್ಶನ ಪ್ರಾರಂಭವಾಗಲಿದ್ದು ಕೃಷಿ ಪ್ರದರ್ಶನ ಮಾರ್ಚ್ ಒಂದರವರಿಗೆ ನಡೆಯಲಿದೆ ಈಗಾಗಲೇ ಬರುವ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳಿಗೆ ಜಾಗ ನಿರ್ಧರಿಸಲಾಗಿದ್ದು ಅಳತೆ ಮಾಡಿ ಸ್ಥಳಾವಕಾಶ ನೀಡಲಾಗಿದೆ.

ಇದು ಅಲ್ಲದೆ ಮಹಾದೇವಸ್ವಾಮಿ ಮಠವನ್ನು ವಿದ್ಯುತ್ ದೀಪ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಸ್ವಚ್ಛತೆ,ಬರುವ ಭಕ್ತರಿಗೆ, ಜನಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ವೈದ್ಯಕೀಯ ಸೌಲಭ್ಯ, ಸುರಕ್ಷಿತಗಾಗಿ ಸದಲಗಾ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದ್ದು, ನೆರೆ ರಾಜ್ಯಗಳಿಂದ ಆಗಮಿಸುವ ಭಕ್ತರ ದರ್ಶನಕ್ಕಾಗಿ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕುಮಾರ್ ಪಾಟೀಲ್ ಮಾತನಾಡಿ *.ಜಾತ್ರೆಯಲ್ಲಿ ಶಾಂತಿ ಸೌಹಾರ್ದತೆಯಿಂದ ಮಹದೇವಸ್ವಾಮಿಯವರ ದರ್ಶನ ಪಡೆದು, ಕೃಷಿ ಹಾಗೂ ಜಾನುವಾರು ಪ್ರದರ್ಶನದ ಲಾಭ ಪಡೆಯಲು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಪಿರಗೊಂಡ ಪಾಟೀಲ, ಕಾರ್ಯದರ್ಶಿ ಶುಭಾಷ್ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಉದಯ ಪಾಟೀಲ, ಶಿವನ್ ಮಡಿವಾಳ್ ಲಿಂಗನಗೌಡ ಪಾಟೀಲ್ ಲಕ್ಷ್ಮಣ್ ಘಾಟಗೆ, ಸುಭಾಷ್ ಮದ್ದಾಳೆ ಸಂತೋಷ್ ಹಂಡೆ ಹಾಗೂ ದೇವಸ್ಥಾನ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!