Ad imageAd image

ಮತಿಲ್ದಾ ಡಿಸೋಜಾಗೆ ಕ್ರೈಸ್ತ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒತ್ತಾಯ

Bharath Vaibhav
ಮತಿಲ್ದಾ ಡಿಸೋಜಾಗೆ ಕ್ರೈಸ್ತ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒತ್ತಾಯ
WhatsApp Group Join Now
Telegram Group Join Now

ಚಿಟಗುಪ್ಪ:ಕ್ರೈಸ್ತರ ಸಾಮಾಜಿಕ,ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಶ್ರೀಮತಿ ಮತಿಲ್ದಾ ಫ್ರಾನ್ಸಿಸ್ ಡಿಸೋಜಾ ಅವರಿಗೆ ಕ್ರೈಸ್ತ ನಿಗಮ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮುಖಂಡ ವಿಜಯಕುಮಾರ ದೊಡ್ಡಮನಿ ಒತ್ತಾಯ ಮಾಡಿದ್ದಾರೆ.

ಚಿಟಗುಪ್ಪ ಪಟ್ಟಣದಲ್ಲಿ ಭಾನುವಾರ ಕರೆದ ಸುದ್ದಿಘೋಷ್ಠಿಯಲ್ಲಿ ಅವರು ಮಾತನಾಡಿದ್ದುಕ್ರೈಸ್ತ ನಿಗಮ ಮಂಡಳಿ ಸ್ಥಾಪನೆ ಮಾಡಿ ಬಹು ದಿನಗಳು ಕಳೆಯುತ್ತಿವೆ.ಇಲ್ಲಿಯವರೆ ಅದರ ಅಧ್ಯಕ್ಷ,ಸದಸ್ಯರ ನೇಮಕ ಮಾಡಿಲ್ಲ.

ಕ್ರೈಸ್ತರ ಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಕ್ರೈಸ್ತ ನಿಗಮ ಮಂಡಳಿಗೆ ಅಧ್ಯಕ್ಷನ್ನ ಸದಸ್ಯನ್ನ ನೇಮಕ ಮಾಡಿ ರಾಜ್ಯದಲ್ಲಿರುವ ಕ್ರೈಸ್ತರ ಬೇಡಿಕೆಯ ದಾಹ ತೀರಸಬೇಕು.

ಸತತವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಕ್ರೈಸ್ತರ ನಾಯಕಿ ಶ್ರೀಮತಿ ಮತಿಲ್ದಾ ಡಿಸೋಜ ಅವರಿಗೆ CDC ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯದಲ್ಲಿನ ಕ್ರೈಸ್ತರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಮೋಜೆಸ್ ಮಿತ್ರ,ಪುಟ್ಟರಾಜ್ ಹೊಸಮನಿ,ಎಡ್ವಾರ್ಡ್ ಸಿಮೋನ್,ರಾಜೇಂದ್ರ ಪ್ರಸಾದ,ರಮೇಶ್ ಮಾಸ್ಟರ್,ಯೋಹಾನ ಕೊಡಂಬಲ್,ರವಿದಾಸ ಕೊಡಂಬಲ್,ಸಂತೋಷ ಆರ್ಮಿ,ಚಿಂಟು ಮರ್ಕಲ್, ಪುಟ್ಟರಾಜ್ ಇಟಗಾ, ಪ್ರಶಾಂತ ಸೇರಿ ಅನೇಕರು ಉಪಸ್ಥಿತರಿದ್ದರು.

ವರದಿ:ಸಜೀಶ ಲಂಬುನೋರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!