ಇಳಕಲ್: ಇಳಕಲ್ , ಹುನಗುಂದ ಪಟ್ಟಣದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯ 2025-26 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆನ್ ಲೈನ್ ಮೂಲಕ ಅರ್ಜಿ ಅವ್ಹಾನಿಸಲಾಗಿದೆ.
5 ನೇ ತರಗತಿ ಅಂಕಪಟ್ಟಿ ಮಗುವಿನ ಆಧಾರ ಕಾರ್ಡ್, ಪೋಟೋ, ಎಸ್ ಎ ಟಿ ಎಸ್ ಸಂಖ್ಯೆ ಹಾಗೂ ಜಾತಿ ಆದಾಯ ಪ್ರಮಾಣಪತ್ರ ಪಡೆದು ಆನ್ ಲೈನ್ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಮೇ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಶೇಕಡಾ ನೂರಕ್ಕೆ ಎಪ್ಪತ್ತೈದು ಮೈನಾರಿಟಿ ಮಕ್ಕಳು ಹಾಗೂ ಇಪ್ಪತ್ತೈದು ರಷ್ಟು ಇತರೇ ವರ್ಗಗಳ ಮಕ್ಕಳಿಗೆ ಅವಕಾಶ ನೀಡಲಾಗಿದೆ.60 ಮಕ್ಕಳಲ್ಲಿ 30 ಹೆಣ್ಣು ಮಕ್ಕಳು 30 ಗಂಡು ಮಕ್ಕಳಿಗೆ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಇನ್ನೂ ಅರ್ಜಿ ಹಾಕದೆ ಇರುವವರು ಅರ್ಜಿ ಸಲ್ಲಿಸಬಹುದು ಎಂದು ವಿಭಾಗೀಯ ತಾಲೂಕಾ ವಿಸ್ತರಣಾಧಿಕಾರಿ ಬಸವರಾಜ ಪಿ ,ಮುಖ್ಯ ಶಿಕ್ಷಕರಾದ ಸಿದ್ದನಗೌಡ ಮಾಚಾ ಹಾಗೂ ಯಮನೂರಸಾ ನದಾಫ ತಾಲೂಕಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಕೆ ಎಚ್ ಸೋಲಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ




